ಸಂತ ವಿಕ್ಟರನ ಆ.ಮಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಪುತ್ತೂರು: ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.



ಅಧ್ಯಕ್ಷತೆ ವಹಿಸಿದ ವಂ|ಮರ್ವಿನ್ ಪ್ರವೀಣ್ ಲೋಬೋ ದೀಪ ಬೆಳಗಿಸಿ ಉದ್ಘಾಟಿಸಿ ಯೋಗದ ಪ್ರಯೋಜನ ಮತ್ತು ಆರೋಗ್ಯ ಸದೃಢತೆಯ ಬಗ್ಗೆ ತಿಳಿಸಿದರು. ಮುಖ್ಯಶಿಕ್ಷಕ ಹ್ಯಾರಿ ಡಿಸೋಜಾ ಯೋಗ ದಿನಾಚರಣೆಯ ಮಾಹಿತಿ ನೀಡಿದರು. ಶಾಲಾ ಸಹಶಿಕ್ಷಕ ಫ್ಲೋರಿನ್ ಡಯಾಸ್, ಫ್ಲೇವಿ ಮಾಡ್ತಾ, ಗೀತಾ ಲೋಬೋ, ಒಲಿವಿಯ ಸಿಕ್ವೇರಾ, ಲೀನಾ ಪಾಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಡಿ. ಪದ್ಮನಾಭ ಪತಂಜಲಿ ಶ್ಲೋಕ ಪ್ರಾರಂಭಿಸಿ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿಶ್ವಯೋಗ ದಿನದ ಪ್ರತಿಜ್ಞೆಯನ್ನು ಹಮ್ಮಿಕೊಳ್ಳಲಾಯಿತು. ಸ್ವಸ್ತಿ ಮಂತ್ರ ಜಪಿಸಲಾಯಿತು. ಶಿಕ್ಷಕ ಶಿಕ್ಷಕೇತರ ವೃಂದದವರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here