







ಪುತ್ತೂರು: ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ಬಲ್ನಾಡು ಗ್ರಾಮದ ತಾರಿಪಡ್ಪು ಜೂ.26ರಂದು ನಡೆದಿದೆ.


ಮಾರುತಿ ಸ್ಪಿಪ್ಟ್ ಕಾರು ಮತ್ತು ಸ್ಕೂಟರ್ ನಡುವೆ ಬಲ್ನಾಡು ಗ್ರಾಮದ ತಾರಿಪಡ್ಪು ಎಂಬಲ್ಲಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು, ಸ್ಕೂಟರ್‌ನಲ್ಲಿದ್ದ ಅಪ್ರಾಪ್ತರಿಬ್ಬರು ಗಾಯಗೊಂಡಿದ್ದು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆ ಕುರಿತು ಕಾರು ಚಾಲಕ ಪಿರಿಯಾಪಟ್ಟಣ ನಿವಾಸಿ ರಾಜು ಎಂಬವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.













