ಕೃಷಿ ಯೋಜನೆಯಡಿ ನೋಡಲ್ ಅಧಿಕಾರಿ ಹುದ್ದೆ: (ಆ.16-18) ಬಿ.ಸಿ.ರೋಡ್‌ನಲ್ಲಿ ಸಂದರ್ಶನ

0

ಪುತ್ತೂರು: ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ.) ಮಂಗಳೂರು ವಿಭಾಗದಿಂದ ಕಡಬ, ಸುಳ್ಯ, ಪುತ್ತೂರು ತಾಲೂಕಿನ ಯುವಕ-ಮಹಿಳೆಯರಿಗೆ ನೋಡಲ್ ಅಧಿಕಾರಿ ಹುದ್ದೆಗೆ ನೇರ ನೇಮಕಾತಿ ನಡೆಯಲಿದೆ.

2026ನೇ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಆಯ್ಕೆಗಾಗಿ 10 ವಲಯ ಪ್ರದೇಶಗಳ ರೈತರನ್ನು ಭೇಟಿ ಮಾಡಿ ಇಳುವರಿ, ಬೆಳೆ ನಿರ್ವಹಣೆ, ಮಿಶ್ರಬೆಳೆ ಸೇರಿದಂತೆ ಸಾಧನಾ ಮಾಹಿತಿ ಸಂಗ್ರಹಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ವಲಯಗಳ ವಿವರ:
ನೆಲ್ಯಾಡಿ-ಬಲ್ಯ, ಕಡಬ, ಇಚ್ಲಂಪಾಡಿ, ಕಲ್ಲುಗುಡ್ಡೆ, ರೆಂಜಿಲಾಡಿ, ಕೋಡಿಂಬಾಳ, ಮರ್ದಾಳ, ಶಿರಾಡಿ, ಗುಂಡ್ಯ, ಉದನೆ, ರೆಖ್ಯ, ಎಡಮಂಗಳ, ಚಾರ್ವಾಕ, ಕಾಣಿಯೂರು, ಸವಣೂರು, ಪುರುಷರಕಟ್ಟೆ, ಆಲಂಕಾರು, ರಾಮಕುಂಜ, ಕುಂತೂರು, ಹೊಸ್ಮಠ, ಸುಬ್ರಹ್ಮಣ್ಯ, ಬಿಳಿನೆಲೆ, ನೆಲ್ಯಾಡಿ, ಇರ್ದೆ, ಬೆಟ್ಟಂಪಾಡಿ, ಪೆರ್ಲಂಪಾಡಿ, ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಮಾಣಿ, ಪುಣಚ, ಕೇಪು.

ಈ ವಲಯ ವ್ಯಾಪ್ತಿಯ 54 ಕೃಷಿಕರನ್ನು ಗುರುತಿಸಿ ಆಗಸ್ಟ್ ತಿಂಗಳಲ್ಲಿ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದ್ದು, ಶಾಸಕರು, ಸಚಿವರು, ಧಾರ್ಮಿಕ ಮುಖಂಡರು, ಸ್ವಾಮೀಜಿಗಳು, ರೈತ ಮುಖಂಡರು ಭಾಗವಹಿಸಲಿದ್ದಾರೆ.

ಸಂದರ್ಶನ ವಿವರ:
ಆಗಸ್ಟ್ 16 ಹಾಗೂ 18 ತಾರೀಕುವರೆಗೂ ನಿರಂತರ ಸಂದರ್ಶನ ಕಾರ್ಯಕ್ರಮ. ಯೋಜನಾ ಕಚೇರಿ ಬಿ.ಸಿ.ರೋಡ್ ಮಂಗಳೂರು ವಿಭಾಗ. ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ಸ್ಥಳ: ಯೋಜನಾ ಕಚೇರಿ, ಯೂನಿಯನ್ ಬ್ಯಾಂಕ್ 2ನೇ ಮಹಡಿ, ಹೋಟೆಲ್ ಚಿಕೋರಿ ಹತ್ತಿರ, ಬಿ.ಸಿ.ರೋಡ್

ಅರ್ಹತೆ:
SSLC/PUC ಉತ್ತೀರ್ಣ, 25 ರಿಂದ 40 ವರ್ಷದೊಳಗಿನ ಪುರುಷ/ಮಹಿಳೆ.
ವೇತನ: 25,000, 32,000, 35,000 ರೂ.
ವಿಶೇಷ ಆದ್ಯತೆ: ದ್ವಿಚಕ್ರ ವಾಹನ ಚಾಲನಾ ಸಾಮರ್ಥ್ಯ ಇರುವ, ತಾಲೂಕು ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧವಿರುವ ಗ್ರಾ.ಪಂ. ಸದಸ್ಯ, CRP, IAO, ಗ್ರಾಮಾಭಿವೃದ್ಧಿ ಸೇವಾ ಪ್ರತಿನಿಧಿ ಮುಂತಾದ ಕೃಷಿ ಕುಟುಂಬದ ಅಭ್ಯರ್ಥಿಗಳು.

ಆಸಕ್ತರು ತಮ್ಮ ಹೆಸರು, ಗ್ರಾಮ, ತಾಲೂಕು, ವಲಯದ ಹೆಸರು ಬರೆದು 7022560060 ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕು. ಯಾವುದೇ ಟಾರ್ಗೆಟ್, ಮಾರ್ಕೆಟಿಂಗ್, ಗೊಬ್ಬರ ಸೇಲ್ಸ್ ಕೆಲಸ ಇಲ್ಲ. ಕೇವಲ ರೈತ ಪ್ರಶಸ್ತಿ ಕಾರ್ಯಕ್ರಮದ ಅರಿವು ಮೂಡಿಸಿ ರೈತರನ್ನು ಕರೆದುಕೊಂಡು ಪ್ರಶಸ್ತಿ ಕೊಡಿಸುವ ಜವಾಬ್ದಾರಿ ಮಾತ್ರ.ಸಂಪರ್ಕ: 7022560060 ಕಚೇರಿ: ಯೂನಿಯನ್ ಬ್ಯಾಂಕ್ 2ನೇ ಮಹಡಿ, ಹೋಟೆಲ್ ಚಿಕೋರಿ ಹತ್ತಿರ, ಬಿ.ಸಿ.ರೋಡ್, ಬಂಟ್ವಾಳ

LEAVE A REPLY

Please enter your comment!
Please enter your name here