






ಶಾಲಾ ನಾಯಕಿ ಕೆ.ಎಫ್ ಸುನೈನಾ, ಶಾಲಾ ಉಪನಾಯಕ ಚಿಂತನ್


ಸವಣೂರು :ಸವಣೂರು ಸ.ಉ. ಹಿ. ಪ್ರಾ ಶಾಲೆಯಲ್ಲಿ 2026-27 ನೇ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ಯನ್ನು ನಡೆಸಲಾಯಿತು.ಮುಖ್ಯ ಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯಗುರು ಶಿವಪ್ಪ ರಾಥೋಡ್ ಕರ್ತವ್ಯ ನಿರ್ವಹಿಸಿದರು. ಶಾಲಾ ಸಂಸತ್ತಿನ ಚುನಾವಣೆ ಮೊಬೈಲ್ ಆಪ್ ಅನ್ನು ಬಳಸಿ ವಿದ್ಯಾರ್ಥಿಗಳಿಂದ ಮತದಾನ ಮಾಡಲಾಯಿತು.



ಈ ಸಂದರ್ಭದಲ್ಲಿ ಮತದಾನದ ಗೌಪ್ಯತೆ ಮತ್ತು ಮತದಾನದ ಮಹತ್ವದ ಬಗ್ಗೆ ಮುಖ್ಯ ಗುರುಗಳು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು,ಈ ಚುನಾವಣೆಯಲ್ಲಿ ಸಹ ಶಿಕ್ಷಕರುಗಳಾದ ತುಳಸಿ.ಎಂ, ಶಶಿಕಲಾ ಟಿ, ನಾಗವೇಣಿ, ಗಣೇಶ್ ಟಿ ಎಂ, ಪ್ರಮೀಳಾ ಪಿ, ಹಾಗೂ ಅತಿಥಿ ಶಿಕ್ಷಕರುಗಳು ಇತರೆ ಕರ್ತವ್ಯಗಳನ್ನ ನಿರ್ವಹಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಅಶ್ರಫ್ ಜನತಾ ರವರು ಚುನಾವಣಾ ಸಂದರ್ಭದಲ್ಲಿ ಹಾಜರಿದ್ದು ಮಕ್ಕಳಿಗೆ ಮತದಾನದ ಮಹತ್ವವನ್ನು ಮೂಡಿಸಿದರು. ಶಾಲಾ ನಾಯಕಿಯಾಗಿ ಕೆ.ಎಫ್ ಸುನೈನ ಮತ್ತು ಉಪನಾಯಕನಾಗಿ ಚಿಂತನ್ ಆಯ್ಕೆಯಾದರೂ, ಶಿಕ್ಷಣ ಮಂತ್ರಿಯಾಗಿ ಆಯಿಷಾತ್ ಶೈಮಾ. ಗೃಹ ಮಂತ್ರಿಯಾಗಿ ಮಹಮ್ಮದ್ ಆಶೀರ್. ಆರೋಗ್ಯಮಂತ್ರಿಯಾಗಿ ಕೆ.ಎಫ್ ಸುಹಾನ. ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ಆಫ್ನಾನ್. ಆಹಾರ ಮಂತ್ರಿಯಾಗಿ ಫಾತಿಮಾ ಕೆ ಎಚ್. ರಕ್ಷಣಾ ಮಂತ್ರಿಯಾಗಿ ಖದೀಜತ್ ನಿದಾ. ನೀರಾವರಿ ಮಂತ್ರಿಯಾಗಿ ಅಭಿಲಾಶ್ ಕುಮಾರ್. ವಾರ್ತಾ ಮಂತ್ರಿಯಾಗಿ ಪೂರ್ವಿ. ಸ್ವಚ್ಛತಾ ಮಂತ್ರಿಯಾಗಿ ತಶ್ರೀಫ. ಕಾನೂನು ಮಂತ್ರಿಯಾಗಿ ಸಫೀರ್. ವಿರೋಧ ಪಕ್ಷದ ನಾಯಕನಾಗಿ ಮೊಹಮ್ಮದ್ ಆಸಿರ್. ಆಯ್ಕೆಯಾಗುವುದರ ಮುಖಾಂತರ ಮಂತ್ರಿಮಂಡಲ ರಚಿಸಲಾಯಿತು.










