






ಅಧ್ಯಕ್ಷರಾಗಿ ಚೇತನಾ ಸತೀಶ್ ಅಜ್ಜಿಕಲ್ಲು, ಉಪಾಧ್ಯಕ್ಷರಾಗಿ ಮೋಹನ್ ನಾಯ್ಕ ಮುಂಡೋವುಮೂಲೆ.


ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಅಜ್ಜಿಕಲ್ಲು ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ಒಕ್ಕೂಟ ಸಭೆಯಲ್ಲಿ ನಡೆಯಿತು.



ಅಧ್ಯಕ್ಷರಾಗಿ ಅಜ್ಜಿಕಲ್ಲು ಶಾಲಾ ಅತಿಥಿ ಶಿಕ್ಷಕಿ ಚೇತನಾ ಸತೀಶ್ ಅಜ್ಜಿಕಲ್ಲು,ಉಪಾಧ್ಯಕ್ಷರಾಗಿ ಮೋಹನ್ ನಾಯ್ಕ ಮುಂಡೋವುಮೂಲೆ, ಕಾರ್ಯದರ್ಶಿಯಾಗಿ ಸುಭಾಷಿಣಿ ಮುಂಡೋವುಮೂಲೆ,ಜೊತೆ ಕಾರ್ಯದರ್ಶಿಯಾಗಿ ನಾಗೇಶ್ ಮುಂಡೋವುಮೂಲೆ ಹಾಗೂ ಕೋಶಾಧಿಕಾರಿಯಾಗಿ ಸುಶಾಂತ್ ಅಜ್ಜಿಕಲ್ಲು ಇವರನ್ನು ಆರಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಸರೋಜ ದೇವಸ್ಯರವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಯೋಜನೆಯ ಅಧಿಕಾರಿ ಮೋಹಿನಿ, ಪ್ರಭಾರ ಸೇವಾ ಪ್ರತಿನಿಧಿ ಕಲಾವತಿ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.










