







ಗೌರವಾಧ್ಯಕ್ಷೆ ಪ್ರಶಾಂತಿ ಬಿ.ಎಸ್., ಅಧ್ಯಕ್ಷ ಹಮೀದ್ ಕೂರ್ನಡ್ಕ, ಪ್ರ.ಕಾರ್ಯದರ್ಶಿ ದೀಪಕ್ ಮಿನೇಜಸ್


ಪುತ್ತೂರು: ಶತಮಾನೋತ್ಸವದ ಹೊಸ್ತಿಲಲ್ಲಿರುವ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಅಸ್ಥಿತ್ವಕ್ಕೆ ಬಂದಿದ್ದು ಅಧ್ಯಕ್ಷರಾಗಿ ಸುದ್ದಿ ಮೀಡಿಯಾದ ಕೆ.ಎ ಹಮೀದ್ ಕೂರ್ನಡ್ಕ, ಪ್ರಧಾನ ಕಾರ್ಯುದರ್ಶಿಯಾಗಿ ಉದ್ಯಮಿ ಸೋಜ ಮೆಟಲ್‌ಮಾರ್ಟ್ ದೀಪಕ್ ಮಿನೇಜಸ್ ಹಾಗೂ ಗೌರವಾಧ್ಯಕ್ಷರಾಗಿ ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಆಯ್ಕೆಯಾಗಿದ್ದಾರೆ.



ಸಂಘದ ಉಪಾಧ್ಯಕ್ಷರಾಗಿ ಉದ್ಯಮಿ ನಿತಿನ್ ಪಕ್ಕಳ, ಪಿ.ಮಹಮ್ಮದ್ ಅಶ್ರಫ್ ಮುಕ್ವೆ, ಅರ್ಷಾದ್ ದರ್ಬೆ, ಮನು ರೈ, ಕೋಶಾಧಿಕಾರಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಐರಿನ್ ವೇಗಸ್, ಸುದ್ದಿ ಬಿಡುಗಡೆ ಬೆಳ್ತಂಡಿಯ ಸಿಇಓ ಸಿಂಚನಾ ಊರುಬೈಲು, ಕಾರ್ಯದರ್ಶಿಯಾಗಿ ಬಜಾಜ್ ಫೈನಾನ್ಸ್ ಪ್ರದೀಪ್ ಕೆ., ಜತೆ ಕಾರ್ಯದರ್ಶಿಯಾಗಿ ಹಿನ್ನೆಲೆ ಗಾಯಕ ವಿನೋದ್ ಆಚಾರ್ಯ, ಸಂಚಾಲಕರಾಗಿ ಮರಿಕೆ ಫ್ಯಾರಡೈಸ್‌ನ ಸುಹಾಸ್ ಮರಿಕೆ, ಸಂಘಟನಾ ಕಾರ್ಯದರ್ಶಿಯಾಗಿ ಮಂಗಳೂರು ಶ್ರೀಕಟೀಲ್ ಲಾಜಿಸ್ಟಿಕ್‌ನ ಜನಾರ್ದನ ಪೂಜಾರಿ ಪದಡ್ಕ, ಮಾಧ್ಯಮ ಪ್ರಮುಖರಾಗಿ ಬಿ,ಜಿ ಕನ್‌ಸ್ಟ್ರಕ್ಷನ್‌ನ ಬಿ.ಜಿ. ಜುನೈದ್, ಕ್ರೀಡಾ ಕಾರ್ಯದರ್ಶಿ ಕೋಸ್ಟಲ್ ಹೋಂನ ಸಂದೇಶ್ ರೈ ಸಂಪ್ಯ, ನವನೀತ್ ಬಜಾಜ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಭಿಜಿತ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಶಾಲೆಯಲ್ಲಿ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್ ಅವರ ನೇತೃತ್ವದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಭೆಯಲ್ಲಿ ನುತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.










