






ಪಕೀರ ಅವರು ಸಂಘದಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ-ತಾರಾನಾಥ ಕಾಯರ್ಗ


ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ ಅವರು ಜೂ.30ರಂದು ಸೇವಾ ನಿವೃತ್ತರಾಗಿದ್ದು, ಸಂಘದ ವತಿಯಿಂದ ಅವರ ಬೀಳ್ಕೊಡುಗೆ ಸಮಾರಂಭ ಸವಣೂರಿನಲ್ಲಿ ಸಂಘದ ಪ್ರಧಾನ ಕಚೇರಿಯ ಸಭಾಭವನದಲ್ಲಿ ನಡೆಯಿತು.




ದಕ್ಷತೆಯಿಂದ ಕಾರ್ಯನಿರ್ವಹಣೆ – ತಾರಾನಾಥ ಕಾಯರ್ಗ:
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗರವರು ಮಾತನಾಡಿ, ಪಕೀರ ಅವರು ಸಂಘದಲ್ಲಿ ಸುದೀರ್ಘ 40 ವರ್ಷ ಸೇವೆ ಸಲ್ಲಿಸಿದ್ದಾರೆ. ಸಂಘದಲ್ಲಿ ಸಣ್ಣ ಹುದ್ದೆಗೆ ಸೇರಿದ ಅವರು ಹಂತ ಹಂತವಾಗಿ ಬಡ್ತಿ ಹೊಂದಿ ಇದೀಗ ಶಾಖಾ ವ್ಯವಸ್ಥಾಪಕರಾಗಿ ನಿವೃತ್ತರಾಗುತ್ತಿದ್ದಾರೆ. ಅವರು ವೃತ್ತಿಯಿಂದ ನಿವೃತ್ತರಾದರೂ ಅವರಿಗೆ ಮುಂದಿನ ಜೀವನದಲ್ಲಿ ಒಳ್ಳೆಯ ಅವಕಾಶ ಇದೆ. ಕೃಷಿ ಕಾಯಕದಲ್ಲಿ ಸಂತಸದಿಂದ ಬದುಕು ಸಾಗಿಸಬಹುದು. ಪಕೀರ ಅವರು ತಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯ ನಿರ್ವಹಿಸಿ, ಸಂಘದ ಬೆಳವಣಿಗೆಯಲ್ಲಿಯೂ ಕೈಜೋಡಿಸಿದ್ದಾರೆ. ಸಂಘದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿ ಜನರ ಮನಸ್ಸು ಗೆದ್ದಿದ್ದಾರೆ. ಅವರ ನಿವೃತ್ತಿ ಜೀವನವು ಸುಖಮಯವಾಗಿರಲೆಂದು ಹಾರೈಸಿದರು.
ಸೀತಾರಾಮ ರೈ ಅವರು ನನಗೆ ಉದ್ಯೋಗ ನೀಡಿದರು-ಪಕೀರ:
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಕೀರ ಅವರು, ನನಗೆ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉದ್ಯೋಗವನ್ನು ನೀಡಿ, ನನ್ನ ಬದುಕಿಗೆ ದಾರಿ ತೋರಿಸಿದ ಸಂಘದ ಮಾಜಿ ಅಧ್ಯಕ್ಷ ಸಹಕಾರರತ್ನ ಸವಣೂರು ಸೀತಾರಾಮ ರೈಯವರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಈ ಹಿಂದಿನ ಆಡಳಿತ ಮಂಡಳಿ ಹಾಗೂ ಈಗಿನ ಆಡಳಿತ ಮಂಡಳಿಯ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಮತ್ತು ಎಲ್ಲಾ ನಿರ್ದೇಶಕರೂ ನನಗೆ ಸದಾ ಮಾರ್ಗದರ್ಶನ ನೀಡಿದ್ದಾರೆ. ಸಂಘದ ಮುಖ್ಯ ಕಾರ್ಯನಿರ್ವಹಣಾಽಣಾಽ ಚಂದ್ರಶೇಖರ್ ಪಿ., ಉಪಕಾರ್ಯನಿರ್ವಹಣಾಽಕಾರಿ ಜಲಜಾ ಎಚ್. ರೈ ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ನಾನು ಅಭಾರಿಯಾಗಿದ್ದೇನೆ. 40 ವರ್ಷಗಳ ಸೇವಾವಽಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂಬ ತೃಪ್ತಿ ಇದೆ ಎಂದರು.
ಪಕೀರ ಅವರದ್ದು ಪ್ರಾಮಾಣಿಕ ಸೇವೆ: ಉದಯ ರೈ :
ಸಂಘದ ಪೂರ್ವಾಧ್ಯಕ್ಷ ಉದಯ ರೈ ಮಾದೋಡಿ ಮಾತನಾಡಿ, 40 ವರ್ಷಗಳ ಕಾಲ ಸಂಘದಲ್ಲಿ ಉದ್ಯೋಗಿಯಾಗಿದ್ದ ಪಕೀರ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿವೃತ್ತ ಜೀವನವು ಸುಖಮಯವಾಗಿರಲಿ ಎಂದು ಹೇಳಿದ ಅವರು, ದ.ಕ. ಮತ್ತು ಶಿರಸಿ ಜಿಲ್ಲೆಯಲ್ಲಿ ಸಹಕಾರ ಸಂಘಗಳು ಅತ್ಯಂತ ಪ್ರಬಲವಾಗಿವೆ. ಜನರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ಉತ್ತಮವಾದ ಸೇವೆ: ಗಣೇಶ್ ನಿಡ್ವಣ್ಣಾಯ:
ಸಂಘದ ನಿಕಟಪೂರ್ವಾಧ್ಯಕ್ಷರಾದ ಗಣೇಶ್ ನಿಡ್ವಣ್ಣಾಯ ಕುಮಾರ ಮಂಗಲ ಮಾತನಾಡಿ, ಪಕೀರ ಅವರು ಸಂಘದ ಉದ್ಯೋಗಿಯಾಗಿ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಉತ್ತಮವಾದ ಸೇವೆಯನ್ನು ನೀಡಿದ್ದಾರೆ ಎಂದು ಹೇಳಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು
.
ಗ್ರಾಹಕರಿಗೆ ಒಳ್ಳೆಯ ಸೇವೆ: ಅಶ್ವಿನ್ ಎಲ್ ಶೆಟ್ಟಿ:
ಸಂಘದ ನಿರ್ದೇಶಕ ಅಶ್ವಿನ್ ಎಲ್.ಶೆಟ್ಟಿ ಮಾತನಾಡಿ, ಸಂಘದ ಸದಸ್ಯರಿಗೆ ಉತ್ತಮವಾದ ಸೇವೆಯನ್ನು ನೀಡುವ ಮೂಲಕ ಪಕೀರರವರು ವೃತ್ತಿಯಲ್ಲಿ ಯಶಸ್ಸು ಕಂಡಿದ್ದಾರೆ. ಸಂಘದ ಉದ್ಯೋಗಿಗಳು ಸಹಕಾರಿ ತತ್ವದ ಬಗ್ಗೆ ಅಳವಾದ ಆಧ್ಯಯನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಉತ್ತಮ ಬಾಂಧವ್ಯ: ವಸಂತ್ ಎಸ್.:
ಎಸ್ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ವಸಂತ್ ಎಸ್.ಮಾತನಾಡಿ, ಸುದೀರ್ಘವಾದ 40 ವರ್ಷಗಳ ಸೇವೆಯ ಮೂಲಕ ಪಕೀರ ಅವರು ಸಂಘ ಮತ್ತು ಸದಸ್ಯರುಗಳ ಮಧ್ಯೆ ಉತ್ತಮ ಬಾಂಧವ್ಯದಿಂದ ಕೆಲಸವನ್ನು ಮಾಡಿದ್ದಾರೆ ಎಂದರು.
ಸಂಘಕ್ಕೆ ಹೆಸರು ತಂದಿದ್ದಾರೆ: ಚಂದ್ರಶೇಖರ್:
ಸಂಘದ ಮುಖ್ಯಕಾರ್ಯನಿರ್ವಹಣಾಽಕಾರಿ ಚಂದ್ರಶೇಖರ್ ಪಿ. ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಕೀರರವರು 40 ವರ್ಷಗಳ ಸುದೀರ್ಘವಾದ ಸೇವೆಯನ್ನು ಮಾಡುವ ಮೂಲಕ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೆಸರು ತಂದಿದ್ದಾರೆ. ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆಯನ್ನು ಚಾಚೂ ತಪ್ಪದೇ ನಿರ್ವಹಿಸಿಕೊಂಡು ಬಂದಿರುವ ಪಕೀರ ಅವರು ಮೃಧು ಸ್ವಭಾವದ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದರು ಎಂದು ಹೇಳಿ, ನಿವೃತ್ತಿ ಜೀವನಕ್ಕೆ ಶುಭಕೋರಿದರು.
ವಿಶ್ವಾಸ, ಅಕ್ಕರೆಯಿಂದ ಕಾಣುತ್ತಿದ್ದರು: ಜಲಜಾ ಎಚ್. ರೈ:
ಸಂಘದ ಉಪಕಾರ್ಯನಿರ್ವಹಣಾಽಕಾರಿ ಜಲಜಾ ಎಚ್ ರೈ ಅವರು ಕಾರ್ಯಕ್ರಮ ನಿರ್ವಹಿಸಿ ಮಾತನಾಡಿ, ಪಕೀರರವರು ಸಂಘದ ಸಿಬ್ಬಂಽಗಳನ್ನು ಅತ್ಯಂತ ಪ್ರೀತಿ, ವಿಶ್ವಾಸ ಹಾಗೂ ಅಕ್ಕರೆಯಿಂದ ಕಾಣುತ್ತಿದ್ದರು, ಸಂಘದಲ್ಲಿ ಸಾರ್ಥಕ ೪೦ ವರ್ಷ ದುಡಿಮೆಗೈದ ಪಕೀರರವರ ನಿವೃತ್ತಿ ಜೀವನಕ್ಕೆ ಶುಭಕೋರಿದರು.
ಸಂಘದ ನಿರ್ದೇಶಕ ತಿಮ್ಮಪ್ಪ ಬನಾರಿ, ಬೆಳಂದೂರು ಶಾಖೆಯ ನೂತನ ಶಾಖಾ ವ್ಯವಸ್ಥಾಪಕಿ ಲೇಖಲತಾ ಮೆದು, ಸಿಬ್ಬಂದಿಗಳಾದ ಮನೋಜ್, ಪ್ರಕಾಶ್ ಮಾಲೆತ್ತಾರು, ದಯಾನಂದ ಮೆದು, ಪವಿತ್ರಾರವರು ಸಂದರ್ಬೋಚಿತವಾಗಿ ಮಾತನಾಡಿದರು. ಸಂಘದ ನಿರ್ದೇಶಕರಾದ ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಎಂ.ಎಸ್. ಕಳುವಾಜೆ, ಗಂಗಾಧರ್ ಪೆರಿಯಡ್ಕ, ಜ್ಞಾನೇಶ್ವರಿ, ಸೀತಾಲಕ್ಷ್ಮಿ, ಮಾಸ್ ಸಂಸ್ಥೆಯ ಸವಣೂರು ಶಾಖಾ ಮೇನೇಜರ್ ಚೇತನ್ ಪ್ರಕಾಶ್, ಸಂಘದ ಸರಾ-ರೂ, ಸವಣೂರು ಅನನ್ಯ ಜ್ಯುವೆಲ್ಸ್ನ ಮಾಲಕ ಪದ್ಮನಾಭ ಆಚಾರ್ಯ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು. ಸಂಘದ ಸಿಬ್ಬಂದಿ ಪ್ರಕಾಶ್ ಕೆಡೆಂಜಿ ಪ್ರಾರ್ಥಿಸಿದರು. ಸಂಘದ ಸಿಬ್ಬಂದಿಗಳು, ಪಿಗ್ಮಿ ಸಂಗ್ರಾಹಕರು ಸಹಕರಿಸಿದರು.
ಅದ್ದೂರಿ ಸನ್ಮಾನ
ಪಕೀರ ಅವರನ್ನು ಸಂಘದ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ, ಗೌರವಿಸಲಾಯಿತು. ಫಲಪುಷ್ಪ, ಹಾರ, ಮೈಸೂರು ಪೇಟ ಹಾಕಿ, ದೇವರ ಸ್ಮರಣಿಕೆ, ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.










