






ಪುತ್ತೂರು: ವೈದ್ಯರ ದಿನಾಚರಣೆಯ ಅಂಗವಾಗಿ ಪುತ್ತೂರಿನ ಇನ್ನರ್‌ವೀಲ್ ಕ್ಲಬ್ ವತಿಯಿಂದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಮಧುರಾ ಭಟ್ ಅವರನ್ನು ಸನ್ಮಾನಿಸಲಾಯಿತು.


ಇನ್ನರ್‌ವೀಲ್ ಕ್ಲಬ್‌ನ 2026-27ನೇ ಸಾಲಿನ ನೂತನ ಅಧ್ಯಕ್ಷೆ ಮನೋರಮಾ ಸೂರ್ಯ ಕಾರ್ಯಕ್ರಮ ನೆರವೇರಿಸಿ ಡಾ. ಮಧುರಾ ಭಟ್ ಅವರ ಸೇವೆಯನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಕ್ಲಬ್‌ನ ಪೂರ್ವಾಧ್ಯಕ್ಷೆ ರೂಪಲೇಖಾ, ನೂತನ ಖಜಾಂಚಿ ಕವಿತಾ ಕೊಳತ್ತಾಯ, ಸಂಧ್ಯಾ ಸಾಯ ಉಪಸ್ಥಿತರಿದ್ದರು.













