6 ಮಂದಿ ರೋಗಿಗಳಿಗೆ 1 ದಿನದ ಡಯಾಲಿಸಿಸ್, ಔಷಧ ವೆಚ್ಚ ಭರಿಸಿದ ಇನ್ನರ್‌ವೀಲ್ ಕ್ಲಬ್ – ವೈದ್ಯರ ದಿನಾಚರಣೆಯಂಗವಾಗಿ ಕ್ಲಬ್‌ನ 2026-27ರ ಪ್ರಥಮ ಕಾರ್ಯಕ್ರಮ

0

ಪುತ್ತೂರು: ಮಹಾವೀರ ಆಸ್ಪತ್ರೆಯಲ್ಲಿರುವ ರೋಟರಿ ಕ್ಲಬ್ ಪುತ್ತೂರು ಡಯಾಲಿಸಿಸ್ ಸೆಂಟರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರು ಮಂದಿ ರೋಗಿಗಳಿಗೆ ಒಂದು ದಿನದ ಡಯಾಲಿಸಿಸ್ ಮತ್ತು ಔಷಧಿಯ ವೆಚ್ಚವನ್ನು ಇನ್ನರ್ ಪುತ್ತೂರಿನ ವೀಲ್ ಕ್ಲಬ್ ಭರಿಸಿದೆ.


ವೈದ್ಯರ ದಿನಾಚರಣೆಯ ಅಂಗವಾಗಿ ಇನ್ನರ್ ವೀಲ್ ಕ್ಲಬ್ ನ ನೂತನ ವರ್ಷ 2026-27 ಸಾಲಿನ ಪ್ರಪ್ರಥಮ ಕಾರ್ಯಕ್ರಮವಾಗಿ 6 ಮಂದಿ ರೋಗಿಗಳಿಗೆ ಒಂದು ದಿನದ ಡಯಾಲಿಸಿಸ್ ಮತ್ತು ಔಷಧಿ ವೆಚ್ಚ ಒಟ್ಟು ರೂ.10ಸಾವಿರ ಅನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.

ಇನ್ನರ್ ವೀಲ್ ಕ್ಲಬ್‌ನ 2026-27 ರ ಅಧ್ಯಕ್ಷೆ ಮನೊರಮಾ ಸೂರ್ಯ, ಮಹಾವೀರ ಅಸ್ಪತ್ರೆಯ ಡಾ. ಅಶೋಕ್ ಪಡಿವಾಳ್, ರೋಟರಿ ಕ್ಲಬ್‌ನ ವಾಮನ್ ಪೈ, ಇನ್ನರ್ ವೀಲ್‌ನ ಪೂರ್ವಾಧ್ಯಕ್ಷೆ ರೂಪಲೇಖಾ ಮತ್ತು ನೂತನ ಖಜಾಂಜಿ ಕವಿತಾ ಕೊಳತ್ತಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here