ಅರಿಯಡ್ಕ ಸ.ಹಿ ಪ್ರಾ. ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಉದ್ಘಾಟನೆ

0

ಪುತ್ತೂರು: ಅರಿಯಡ್ಕ ಸ.ಹಿ ಪ್ರಾ. ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಉದ್ಘಾಟನೆಗೊಂಡಿತು.

ದಾನಿ ಚಿಕ್ಕಪ್ಪ ನಾಯ್ಕ್ ತರಗತಿಗಳನ್ನು ಉದ್ಘಾಟಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್, ಶಿಕ್ಷಣ ಸಂಯೋಜಕಿ ಅಮೃತಕಲಾ, ಮುಖ್ಯ ಶಿಕ್ಷಕಿ ಯಮುನಾವತಿ ಬಿ.ಬಿ, ಗ್ಯಾರಂಟಿ ಸಮಿತಿ ಸದಸ್ಯ ಅಶೋಕ್ ಕುಮಾರ್ ಬೊಳ್ಳಾಡಿ, ಹರೀಶ್ ರೈ ಜಾರತ್ತಾರು, ಮಹಮ್ಮದ್ ಬೊಳ್ಳಾಡಿ, ರಫೀಕ್ ದರ್ಖಾಸು, ಸುಂದರ ಶೇಖಮಲೆ, ಪುಷ್ಪಾವತಿ ಬೊಳ್ಳಾಡಿ, ನಿವೃತ್ತ ಶಿಕ್ಷಕಿ ಕಮಲಾಕ್ಷಿ ಕೆ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿಲಕ್ಷ್ಮಿ, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಅಡುಗೆ ಸಿಬ್ಬಂದಿಯುವರು ಉಪಸ್ಥಿತರಿದ್ದರು. ಅಶ್ವಿನ್ ರೈ ಅರಿಯಡ್ಕ ಸಭೆ ಉದ್ಘಾಟಿಸಿದರು. ಬಶೀರ್ ಕೌಡಿಚ್ಚಾರು ಮಾತನಾಡಿದರು. ಮುಖ್ಯ ಶಿಕ್ಷಕಿ ಯಮುನಾವತಿ ಬಿ.ಬಿ ಸ್ವಾಗತಿಸಿದರು. ಶಿಕ್ಷಕಿ ತೇಜಶ್ರೀ ವಂದಿಸಿದರು. ಸಹ ಶಿಕ್ಷಕಿ ಮಾಲತಿ ಕೆ ನಿರೂಪಿಸಿದರು. ಶಿಕ್ಷಕಿ ಶ್ವೇತಾ ರೈ ಸಹಕರಿಸಿದರು.

LEAVE A REPLY

Please enter your comment!
Please enter your name here