






ಬಡಗನ್ನೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಡುವ ಚಿಕ್ಕ ಮೇಳದ ಮೂರನೇ ವರ್ಷದ ತಿರುಗಾಟವು ಜೂ 22 ರಂದು ಸಂಜೆ ಗಂ 7 ಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ಗೆಜ್ಜೆಸೇವೆಯೊಂದಿಗೆ ಆರಂಭಗೊಂಡಿತು.


ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ರೈ ಕಟ್ಟಾವು ರವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಪಡುಮಲೆ ಶ್ರೀ ಕೊವೆ ಶಾಸ್ತಾರ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಪಿ ರಾಮಣ್ಣ ಗೌಡ ಬಸವಹಿತ್ತಿಲು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೖೆಸಿದರು.




ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪುರಂದರ ರೈ ಕುದ್ಕಾಡಿ, ಉದಯಕುಮಾರ್ ಪಡುಮಲೆ, ಗೋಪಾಲ ನಾಯ್ಕ ದೊಡ್ಡಡ್ಕ ಮತ್ತು ಗಡಿನಾಡ ಸಾಹಿತ್ಯ ವೇದಿಕೆಯ ಅಧ್ಯಕ್ಷರು ಯಕ್ಷಗಾನ ಕಲಾವಿದರು ಆದ ಚನಿಯಪ್ಪ ನಾಯ್ಕ ಸುಳ್ಯಪದವು, ರಾಮಕೃಷ್ಣ ಭಟ್ ಚಂದುಕೂಡ್ಲು ಪುರಂದರ ರೈ ಸೇನೆರೆ ಮಜಲು ಗಣೇಶ್ ಭಟ್,ಸುರೇಶ್ ಹೆಗ್ಡೆ ಕುಲದಪಾ ರೆ , ಉತ್ತಮ ಭಟ್ ಪಡ್ಪು, ಗಿರೀಶ್ ಕುಮಾರ್ ಪದಡ್ಕ, ಪುಷ್ಪರಾಜ ಅಳ್ವ , ಸಂಚಾಲಕರಾದ ಚಂದ್ರಶೇಖರ ಸುಳ್ಯಪದವು,ಚಿಕ್ಕ ಮೇಳದ ವ್ಯವಸ್ಥಾಪಕ ದಾಮೋದರ ಪಾಟಾಳಿ ಹಾಗೂ ಗ್ರಾಮಸ್ಥರು ಉಪಸಿತರಿದ್ದರು.ಸಂಚಾಲಕ ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮ ನಿರೂಪಿಸಿದರು.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ರವರು ಶ್ರೀ ದೇವರಿಗೆ ಪೂಜೆ ನೆರವೇರಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿ ಚಿಕ್ಕ ಮೇಳದ ದೇವರನ್ನು ಮೇಳಕ್ಕೆ ಹಸ್ತಾಂತರಿಸಿದರು.ಬಳಿಕ ಗೆಜ್ಜೆ ಸೇವೆಯೊಂದಿಗೆ ಖ್ಯಾತ ಸ್ತ್ರೀ ವೇಷಧಾರಿ ಕೆದಿಲ ಜಯರಾಮ ಭಟ್, ಉತ್ತಮ ಪಡ್ಪು , ಭಾಗವತರಾದ ಸುರೇಶ ಹೆಗ್ಡೆ ಕುಲದಪಾರೆ ಮದ್ದಳೆ ವಾದಕರಾದ ಕೃಷ್ಣ ಪ್ರಸಾದ್ ಬನಾರಿ ಇವರುಗಳಿಂದ ಗೆಜ್ಜೆ ಸೇವೆ ನೆರವೇರಿಸಿ ಬಳಿಕ ಮನೆಮನೆ ತಿರುಗಾಟ ಆರಂಭಿಸಲಾಯಿತು.










