







ನೆಲ್ಯಾಡಿ: ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಇದರ ವತಿಯಿಂದ ಶೈಖುನಾ ತ್ವಾಖಾ ಉಸ್ತಾದ್ ಅನುಸ್ಮರಣಾ ಮಜ್ಲಿಸ್ ಜು.3ರಂದು ಜುಮಾ ನಮಾಝಿನ ಬಳಿಕ ಕೋಲ್ಪೆ ನೂರಾನಿಯ್ಯ ಮದ್ರಸ ಸಭಾಂಗಣದಲ್ಲಿ ನಡೆಯಿತು.



ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆಜಿಎನ್ ಅಬ್ದುಲ್ ಶುಕೂರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೋಲ್ಪೆ ಬಿಜೆಎಂ ಖತೀಬರಾದ ಇಸ್ಹಾಕ್ ಫೈಝಿ ಕುಕ್ಕಿಲ ಅನುಸ್ಮರಣಾ ಭಾಷಣ ಮಾಡಿದರು. ಶೈಖುನಾ ತ್ವಾಖಾ ಉಸ್ತಾದರ ಪುತ್ರ ಹುಸೈನ್ ರಹ್ಮಾನಿ ಉದ್ಘಾಟಿಸಿದರು. ಕೋಲ್ಪೆ ಬಿಜೆಎಂ ಮಾಜಿ ಅಧ್ಯಕ್ಷರಾದ ಕೆ.ಕೆ.ಅಬೂಬಕ್ಕರ್, ಎಂ.ಆದಂ, ಕೋಶಾಧಿಕಾರಿ ಎಸ್.ಇಕ್ಬಾಲ್ ಕೋಲ್ಪೆ, ಉಪಾಧ್ಯಕ್ಷರಾದ ಅಬ್ದುಲ್ಲಾ ಕುಂಞಿ ಗೋಳಿತ್ತೊಟ್ಟು, ಎಸ್.ಕೆ.ರಝಾಕ್ ಕೋಲ್ಪೆ, ಗೋಳಿತ್ತೊಟ್ಟು ರಹ್ಮಾನಿಯಾ ಜಮೀಲ ಜುಮಾ ಮಸೀದಿ ಖತೀಬರಾದ ಶಾಖಿರ್ ನಿಝಾಮಿ, ಅಧ್ಯಕ್ಷ ಹೆಚ್.ಆರಿಫ್ ಗೋಳಿತ್ತೊಟ್ಟು, ನ್ಯಾಯವಾದಿ, ನೋಟರಿ ಇಸ್ಮಾಯಿಲ್ ನೆಲ್ಯಾಡಿ, ಕೋಲ್ಪೆ ನೂರಾನಿಯ್ಯ ಮದ್ರಸದ ಮುಅಲ್ಲಿಂಗಳಾದ ಆದಂ ದಾರಿಮಿ ತೆಕ್ಕಾರ್, ಮುಹಮ್ಮದ್ ಶರೀಫ್ ನಿಝಾಮಿ ಆತೂರು, ಕೋಲ್ಪೆ ಬಿಜೆಎಂ ಮುಅಝ್ಝಿನ್ ಮುಹಮ್ಮದ್ ಮುಸ್ಲಿಯಾರ್, ಎಸ್ಕೆಎಸ್ಎಸ್ಎಫ್ ಕೋಲ್ಪೆ ಶಾಖೆ ಅಧ್ಯಕ್ಷ ಎಂ.ಕೆ.ರಹೀಂ, ಪ್ರಧಾನ ಕಾರ್ಯದರ್ಶಿ ಝುನೈಫ್, ಕೋಲ್ಪೆ ಖಲಂದರ್ ಶಾ ದಫ್ ಸಮಿತಿ ಅಧ್ಯಕ್ಷ ಎಂ.ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಕೆ.ಕೆ.ಇಸ್ಮಾಯಿಲ್ ಹಾಜಿ ಕೋಲ್ಪೆ ಉಪಸ್ಥಿತರಿದ್ದರು.



ಕೋಲ್ಪೆ ನೂರಾನಿಯ್ಯ ಮದ್ರಸದ ಸದರ್ ಉಸ್ತಾದ್ ಅಬ್ದುಲ್ ಜಬ್ಬಾರ್ ಅಸ್ಲಮಿ ಕರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಲ್ಪೆ ಬಿಜೆಎಂ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಮೀರ್ ಅರ್ಶದಿ ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಿತು.










