ಪುತ್ತೂರು: ಮಾದಕ ವಸ್ತು ಸೇವನೆ – ಇಬ್ಬರ ಬಂಧನ

0

ಪುತ್ತೂರು: ಮಾದಕ ವಸ್ತು ಸೇವಿಸಿ ಕೆಮ್ಮಿಂಜೆ ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಪುತ್ತೂರು ನಗರ ಪೊಲೀಸ್‌ ಠಾಣೆ ಪೊಲೀಸರು ಜು.2 ರಂದು ಠಾಣಾ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಸಮಯ ಮಧ್ಯಾಹ್ನ ಕೆಮ್ಮಿಂಜೆ ಗ್ರಾಮದ ಚಾಕೊಲೇಟ್ ಫ್ಯಾಕ್ಟರಿ ಬಳಿಯ ಬಸ್ಸು ತಂಗುದಾಣದ ಬಳಿ ಸಾರ್ವಜನಿಕ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಬಂದ ಮಾಹಿತಿ ಪ್ರಕಾರ ಅಲ್ಲಿಗೆ ಹೋದಾಗ ವ್ಯಕ್ತಿಗಳಿಬ್ಬರು ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಅವರು ನಶೆಯಲ್ಲಿದಂತೆ ಕಂಡುಬಂದಿದ್ದು, ಯಾವುದೋ ನಿಷೇಧಿತ ಮಾಧಕ ವಸ್ತುವನ್ನು ಸೇವಿಸಿದವರಂತೆ ಕಂಡು ಬಂದಿರುತ್ತಾರೆ. ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ ಅವರು ಮಾದಕ ವಸ್ತುವನ್ನು ಸೇವಿಸಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಸಪ್ವಾನ್ ಮಹಮ್ಮದ್ ಪ್ರಾಯ ( 31ವ), ಮತ್ತು ಮಹಮ್ಮದ್ ಝೈನ್ ಪಿ.ಕೆ ( 26ವ) ಬಂಧಿತ ಆರೋಪಿಗಳು. ಅವರಿಬ್ಬರನ್ನು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ಅಲ್ಲಿನ ವೈದ್ಯಾಧಿಕಾರಿಗಳು ಪರೀಕ್ಷಿಸಿ ವೈದ್ಯಕೀಯ ದೃಡ ಪತ್ರದಲ್ಲಿ ನಿಷೇಧಿತ ಮಾದಕ ವಸ್ತು ಸೇವೆ ಧೃಡಪಟ್ಡ ಹಿನ್ನಲೆಯಲ್ಕಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ‌.

LEAVE A REPLY

Please enter your comment!
Please enter your name here