ದರ್ಬೆಯಲ್ಲಿ ಶಾಂತಿ ಫ್ಯಾನ್ಸಿ ಶುಭಾರಂಭ

0

ಪುತ್ತೂರು: ದರ್ಬೆ ಮುಖ್ಯ ರಸ್ತೆಯ ಮೊಯ್ದಿನ್ ಕಾಂಪ್ಲೆಕ್ಸ್ ನಲ್ಲಿ ಶಾಂತಿ ಫ್ಯಾನ್ಸಿ ಮಳಿಗೆಯು ಜು.6 ರಂದು ಶುಭಾರಂಭಗೊಂಡಿತು.


ಮಳಿಗೆಯ ಮಾಲಕರಾದ ವಿನಿಲ್ ಮಸ್ಕರೇನ್ಹಸ್, ಅವರ ಪತ್ನಿ ಆನಿ ಮಸ್ಕರೇನ್ಹಸ್, ತಾಯಿ ಫೆಲ್ಸಿ ಹಿಲ್ಡಾ ಲಸ್ರಾದೋರವರು ಜೊತೆಗೂಡಿ ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ|ಜೆ.ಬಿ ಮೊರಾಸ್ ರವರು ಮಳಿಗೆಗೆ ಪವಿತ್ರ ಜಲ ಸಿಂಪಡಿಸಿ ಮಾತನಾಡಿ, ದೇವರು ಪ್ರತಿಯೋರ್ವನಿಗೆ ಒಂದಲ್ಲ ಒಂದು ಪ್ರತಿಭೆಯನ್ನು ಕರುಣಿಸಿರುತ್ತಾನೆ. ಆದರೆ ಆ ಪ್ರತಿಭೆಯನ್ನು ಓರೆಗೆ ಹಚ್ಚಬೇಕಾಗಿರುವುದು ಅವರವರ ಕರ್ತವ್ಯವಾಗಿದೆ. ಇಂದಿಲ್ಲಿ ಉದ್ಘಾಟನೆಗೊಂಡ ನೂತನ ಫ್ಯಾನ್ಸಿ ಮಳಿಗೆಗೆ ಆಗಮಿಸುವ ಗ್ರಾಹಕರಿಗೆ ನಗುಮುಖದ, ಗುಣಮಟ್ಟದ ಸೇವೆಯನ್ನು ನೀಡಿದಾಗ ವ್ಯವಹಾರ ವೃದ್ಧಿಸುತ್ತದೆ ಎಂದು ಆಶೀರ್ವಚನ ನೀಡಿದರು.


ಈ ಸಂದರ್ಭದಲ್ಲಿ ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಪ್ರವೀಣ್ ಮರ್ವಿನ್ ಲೋಬೊ, ಮಳಿಗೆಯ ಮಾಲಕರಾದ ವಿನಿಲ್ ಮಸ್ಕರೇನ್ಹಸ್ ರವರ ಮಾವ ನಿವೃತ್ತ ಸೈನಿಕ ಮಸ್ಕರೇನ್ಹಸ್, ಅತ್ತೆ ಸಬೀನಾ ಮಸ್ಕರೇನ್ಹಸ್, ತಮ್ಮ ನಿಖಿಲ್ ಮಸ್ಕರೇನ್ಹಸ್ ಸಹಿತ ಕುಟುಂಬಿಕರು, ಹಿತೈಷಿಗಳು ಹಾಜರಿದ್ದು ಶುಭ ಹಾರೈಸಿದರು.
ಮಳಿಗೆಯ ಮಾಲಕ ವಿನಿಲ್ ಮಸ್ಕರೇನ್ಹಸ್ ರವರ ತಂದೆಯವರಾದ ದಿ.ಎಡ್ವರ್ಡ್ ಮಸ್ಕರೇನ್ಹಸ್ ರವರು ಪುತ್ತೂರು ಮುಖ್ಯ ರಸ್ತೆಯ ಜುಮಾ ಮಸೀದಿಯ ಕಟ್ಟಡದಲ್ಲಿ ಹಲವಾರು ವರ್ಷ ಶಾಂತಿ ಫ್ಯಾನ್ಸಿ ಮಳಿಗೆಯನ್ನು ಮುನ್ನೆಡೆಸಿದ್ದರು. ಈಗ ಅವರ ನೆನಪಿಗಾಗಿ ದರ್ಬೆಯಲ್ಲಿ ಅದೇ ಹೆಸರಿನಲ್ಲಿ ಮಳಿಗೆಯು ಶುಭಾರಂಭಗೊಂಡಿದೆ.

ಮಹಿಳೆಯರ ಅಲಂಕಾರಿಕ ವಸ್ತುಗಳು, ಸೀರೆ, ನೆರಿಗೆ ಸೇವೆಗಳು, ಆಂಟಿಕ್ ಆಭರಣಗಳು, ವನ್ ಗ್ರಾಂ ಗೋಲ್ಡ್, ಗಿಪ್ಟ್ ಐಟಮ್ಸ್, ಬ್ಯಾಗ್ಸ್, ಟಾಯ್ಸ್ ಐಟಮ್ಸ್, ಮದುವೆಗೆ ಬೇಕಾದ ಶೃಂಗಾರ ಸಾಧ‌ನಗಳು, ಫ್ಲವರ್ ಐಟಮ್ಸ್ ಇತ್ಯಾದಿ ವಸ್ತುಗಳು ದೊರೆಯಲಿದೆ. ಗ್ರಾಹಕರು ಆಗಮಿಸಿ ನಮಗೆ ಪ್ರೋತ್ಸಾಹಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 7259899952 ಸಂಪರ್ಕಿಸಬಹುದು.

-ಆನಿ ವಿನಿಲ್ ಮಸ್ಕರೇನ್ಹಸ್,
ಮಾಲಕರು, ಶಾಂತಿ ಫ್ಯಾನ್ಸಿ, ದರ್ಬೆ

LEAVE A REPLY

Please enter your comment!
Please enter your name here