






ಉಪ್ಪಿನಂಗಡಿ: ಮುಂಗಾರು ಮತ್ತೆ ದುರ್ಬಲಗೊಂಡಿದ್ದು, ಮಳೆ ಪ್ರಮಾಣ ಗಣನೀಯ ಕುಸಿತ ಕಂಡ ಪರಿಣಾಮ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ- ನೇತ್ರಾವತಿ ನದಿಗಳಲ್ಲಿ ನೀರಿನ ಹರಿವು ಕುಸಿತ ಕಂಡಿದೆ.


ಆದಿತ್ಯವಾರದಂದು ಮುಂಜಾನೆ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಬಿರುಗಾಳಿಗೆ ಸಿಲುಕಿ ಇಳಂತಿಲ ಗ್ರಾಮದ ಗೋಪಾಲಕೃಷ್ಣ ಭಟ್ ರವರ ಮನೆಗೆ ಮರ ಬಿದ್ದು ಹಾನಿಯುಂಟಾಗಿದೆ. ಉಪ್ಪಿನಂಗಡಿಯ ನಟ್ಟಿಬೈಲ್ ನಿವಾಸಿ ನಾಗೇಶ್ ಎಂಬವರ ತೋಟದ ಅಡಕೆ ಮರಗಳು ತುಂಡಾಗಿ ಬಿದ್ದಿದ್ದು, ಕೃಷಿ ನಾಶವಾಗಿದೆ. ವೆಂಕಪ್ಪ ಗೌಡ ಎಂಬವರ ತೋಟದ ಹಣ್ಣಿನ ಮರಗಳು ಬಿರುಗಾಳಿ ಸಿಲುಕಿ ಧರೆಗುರುಳಿವೆ. ಹೇರಂಭ ಶಾಸ್ತ್ರಿ ಎಂಬವರ ಮನೆಯ ಮೇಲ್ಛಾವಣಿಯ ಸೀಮೆಂಟ್ ಶೀಟ್‌ಗಳು ಬಿರುಗಾಳಿಗೆ ಸಿಲುಕಿ ಹಾರಿ ಹೋಗಿದೆ.
ಇದರ ಹೊರತಾಗಿ ದಿನವಿಡೀ ಬಿಸಿಲ ವಾತಾವರಣ ಕಂಡು ಬಂದಿತ್ತು. ಶನಿವಾರದಂದು 25.3 ಮೀಟರ್ ನಲ್ಲಿದ್ದ ನದಿಯ ನೀರಿನ ಮಟ್ಟ ಆದಿತ್ಯವಾರದಂದು 24 ಮೀಟರ್ ಗೆ ಕುಸಿತ ಕಂಡಿದೆ.













