ಅಳಿಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ

0

ಪುಣಚ: ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಅಳಿಕೆ ಇದರ ವತಿಯಿಂದ ಕೇಪು ಶಿವ ಕ್ಷೇತ್ರ ಖಂಡಿಗದಿಂದ ಉಳ್ಳಾಲ್ತಿ ದೇವಸ್ಥಾನದ ರಸ್ತೆಯ ಸುಮಾರು ಎರಡು ಕಿಲೋ ಮೀಟರ್ ರಸ್ತೆಯ ಎರಡೂ ಬದಿಗಳಲ್ಲಿ ಬಾಗಿದ ಗಿಡ, ಬಳ್ಳಿ, ಪೊದೆಗಳನ್ನು ತೆರೆವುಗೊಳಿಸುವ ಕಾರ್ಯ ಜು.5ರಂದು ನಡೆಯಿತು.


ಈ ಸಂದರ್ಭ ಘಟಕದ ಮೇಲ್ವಿಚಾರಕಿ ಮೀನಾಕ್ಷಿ, ನೀರ್ಕಜೆ ಒಕ್ಕೂಟದ ಅಧ್ಯಕ್ಷೆ ಭವ್ಯ ಕುಮಾರಿ, ಘಟಕದ ಸದಸ್ಯರಾದ ಪುಟ್ಟಣ್ಣ, ಸರಸ್ವತಿ, ಪ್ರೇಮ, ವಿನೋದ್, ಲಕ್ಷ್ಮಣ, ಕುಶಾಲಪ್ಪ, ರವೀಶ್, ದೀಪಕ್, ಸ್ಥಳೀಯರಾದ ವಿನಯ, ಚಂದಪ್ಪ ಗೌಡ, ಬಾಬು ಮಾಸ್ಟರ್, ರವಿ ಹಾಗೂ ಕೆ.ಇ.ಬಿ ಸಿಬ್ಬಂದಿ ಸಂಜು ಚವ್ಹಾನ್ ಭಾಗವಹಿಸಿದರು.

LEAVE A REPLY

Please enter your comment!
Please enter your name here