






38ವರ್ಷಗಳ ಹಿಂದೆ ಪುತ್ತೂರಿನವರಿಗೆ ಮಾಧ್ಯಮವಾಗಿ ತಲುಪಲು ಸುದ್ದಿ ಬಿಡುಗಡೆ ಪತ್ರಿಕೆ ಪ್ರಾರಂಭಿಸಿದ್ದೆವು. ನಂತರ ಇ-ಪೇಪರ್, ವೆಬ್‌ಸೈಟ್, ಚಾನೆಲ್, ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನಾದ್ಯಂತ ಇರುವ ಪುತ್ತೂರಿನವರನ್ನು ತಲುಪಲು ಪ್ರಯತ್ನಿಸಿದ್ದೇವೆ. ಇದರಿಂದ ಪುತ್ತೂರಿನ ಜನರು ಪರಸ್ಪರ ಸಂಪರ್ಕದಿಂದ, ಮಾಹಿತಿಯಿಂದ ಜಾಗತಿಕವಾಗಿ ಇರುವ ಪುತ್ತೂರಿನವರೊಂದಿಗೆ ಗುರುತಿಸಿಕೊಂಡದ್ದಲ್ಲದೆ, ಅಭಿವೃದ್ಧಿ ಹೊಂದಲು ಕಾರಣವಾಗಿದೆ ಎಂದು ಈ ಹಿಂದೆಯೂ ಬರೆದಿದ್ದೆವು.


ಇದೀಗ ಸುದ್ದಿ ಅರಿವು ಕೇಂದ್ರದ ಮೂಲಕ ಜನರ ಉತ್ಪನ್ನಗಳನ್ನು, ಸೇವೆಯನ್ನು ಮಾರ್ಕೆಟ್ ಮಾಡುವ ಕೆಲಸಕ್ಕೆ ಕೈ ಹಾಕಿದ್ದೇವೆ. ಈ ಕಾರ್ಯಗಳು ಪುತ್ತೂರಿನಲ್ಲಿ ಮಾತ್ರವಲ್ಲದೆ ಸುಳ್ಯ, ಬೆಳ್ತಂಗಡಿಯಲ್ಲಿ ನಡೆಯುತ್ತಿದ್ದು ಸುದ್ದಿ ಮೀಡಿಯಾ ಹೌಸ್ ಸಂಸ್ಥೆಯ ಮೂಲಕ ಮಂಗಳೂರು, ಬೆಂಗಳೂರಿಗೂ ವಿಸ್ತರಣೆಯಾಗುತ್ತಿದೆ. (ಸುದ್ದಿ ಬಿಡುಗಡೆ ಪತ್ರಿಕೆ ಮಂಗಳೂರು ಮತ್ತು ಬೆಂಗಳೂರಿನಲ್ಲಿ ದೊರಕುವಂತೆ ಮಾಡಿದ್ದೇವೆ.)



ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ಮಾಧ್ಯಮವನ್ನು ಪುತ್ತೂರಿನಲ್ಲಿ ಮನೆ ಮನೆಗೆ, ಮಳಿಗೆಗಳಿಗೆ ತಲುಪಿಸುವ (ಮಾಹಿತಿ ಸಂಗ್ರಹಿಸುವ) ಮತ್ತು ಜಗತ್ತಿನಾದ್ಯಂತ ಇರುವ ಪುತ್ತೂರಿನವರಿಗೆ ಮುಟ್ಟಿಸುವ ಮೂಲಕ ಪುತ್ತೂರನ್ನು ಸಂಪೂರ್ಣ ಮಾಧ್ಯಮ (ಮಾಹಿತಿ) ತಾಲೂಕನ್ನಾಗಿ ಮಾಡುವ ಯೋಜನೆಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡಬೇಕಾಗಿ ವಿನಂತಿಸುತ್ತಿದ್ದೇವೆ.
ಸಂಪರ್ಕಕ್ಕಾಗಿ : ಸುದ್ದಿ ಕಚೇರಿ, ದೇವಣ್ಣ ಕಿಣಿ ಬಿಲ್ಡಿಂಗ್, ಯೂನಿಯನ್ ಬ್ಯಾಂಕ್ ಬಳಿ ಮುಖ್ಯರಸ್ತೆ ಪುತ್ತೂರು | ದೂ: 7829503541
ಅರಿವು ಕೇಂದ್ರ ಕ್ರಿಸ್ಟೋಫರ್ ಬಿಲ್ಡಿಂಗ್ ಎಪಿಎಂಸಿ ರಸ್ತೆ ಪುತ್ತೂರು, 8050293990
ಸುದ್ದಿ ಸೆಂಟರ್ ಪುತ್ತೂರು ಮೊ: 9620372389










