ಬೊಳುವಾರು ಕ್ಷೇತ್ರದಲ್ಲಿ `ಶ್ರೀಕೃಷ್ಣ ನಿರ್ಯಾಣ’ ತಿಂಗಳ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ದೇವಸ್ಥಾನದಲ್ಲಿ ಕ್ಷೇತ್ರದ ಯಕ್ಷ ಕಲಾ ಪ್ರತಿಷ್ಠಾನದ (ರಿ) ವತಿಯಿಂದ ತಿಂಗಳ ತಾಳಮದ್ದಳೆಯಲ್ಲಿ ಜುಲೈ ತಿಂಗಳಿನ ತಾಳಮದ್ದಳೆ “ಶ್ರೀಕೃಷ್ಣ ನಿರ್ಯಾಣ” ಪ್ರಸಂಗವು ಜು.5ರಂದು ಅಪರಾಹ್ನ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ಶ್ರೀಪತಿ ನಾಯಕ್ ಅಜೇರು, ರಾಜಗೋಪಾಲ ಜೋಶಿ ಹಾಗೂ ಕು.ಸಂಹಿತಾ ಸಹಕರಿಸಿದರು. ಚೆಂಡೆ ಮತ್ತು ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ, ಪ್ರಚೇತ್ ಆಳ್ವ, ಅಧ್ವೈತ್ ಕೃಷ್ಣ, ಸಮರ್ಥ್, ಸುಧನ್ವ, ಶ್ರೀಯಾ, ಅನೀಶ್, ಆಯುಷ್ ರೈ, ಗೌತಮ್ ಕೃಷ್ಣ, ಪ್ರಮಥ್, ಧ್ರುವ, ಪ್ರಶ್ವಿತ್ ಮತ್ತು ಪ್ರತಿಷ್ಠಾನದ ಇತರ ವಿದ್ಯಾರ್ಥಿಗಳು ಸಹಕರಿಸಿದರು. ಅರ್ಥಧಾರಿಗಳಾಗಿ ಗುಂಡ್ಯಡ್ಕ ಈಶ್ವರ ಭಟ್, ಭಾಸ್ಕರ ಶೆಟ್ಟಿ, ಶಂಕರ ಸಾರಡ್ಕ, ಕೇಶವ ಭಟ್ ಕೇಕಣಾಜೆ, ಪ್ರಸನ್ನ ಕುಮಾರ್ ಬಳ್ಳಾಲ್, ಡಾ. ಗೀತಾ ಕುಮಾರಿ, ಜಗನ್ನಾಥ ಪುಣಚ, ಗಣಪತಿ ನಾಯಕ್, ಪ್ರಚೇತ್ ಆಳ್ವ, ಅಧ್ವೈತ್ ಕೃಷ್ಣ ಸಹಕರಿಸಿದರು.

ಪ್ರತಿಷ್ಠಾನದ ಪ್ರಸನ್ನ ಕುಮಾರ್ ಬಳ್ಳಾಲ್ ಸ್ವಾಗತಿಸಿ, ಕಾರ್ಯದರ್ಶಿ ಶಂಕರ ಭಟ್ ಧನ್ಯವಾದಗೈದರು. ಕು. ಪ್ರಣಮ್ಯ ಪಾಲೆಚ್ಚಾರುರವರ ಹುಟ್ಟುಹಬ್ಬದ ಸಲುವಾಗಿ ಸುಲೋಚನಾ ಮತ್ತು ಗಣಪತಿ ನಾಯಕ್ ಪಾಲೆಚ್ಚಾರು ತಿಂಗಳ ತಾಳಮದ್ದಳೆಯ ಪ್ರಾಯೋಜಕತ್ವವನ್ನು ವಹಿಸಿದ್ದು, ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರತಿಷ್ಠಾನದ ಉಪಾಧ್ಯಕ್ಷ ಗುಂಡ್ಯಡ್ಕ ಈಶ್ವರ ಭಟ್ ಶಾಲು ಹಾಕಿ ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷ, ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ದೇವಳದಲ್ಲಿ ವಿಶೇಷ ಪಾರ್ಥನೆಯನ್ನು ಸಲ್ಲಿಸಿ ಪ್ರಸಾದವನ್ನು ನೀಡಿ ಶುಭ ಹಾರೈಸಿದರು. ಸದಸ್ಯರಾದ ವಸಂತ ನಾಯಕ್ ಅಜೇರು, ಅನಂತನಾರಾಯಣ, ಬಾಲಸುಬ್ರಹ್ಮಣ್ಯ ಶರ್ಮ, ಗಣೇಶ್ ಡಿ ಎಸ್, ಹರ್ಷ ಪುಣಚ, ನವೀನ್ ರೈ, ಸುಬ್ಬಯ್ಯ ರೈ ಮೊದಲಾದವರು ಸಹಕರಿಸಿದರು.

LEAVE A REPLY

Please enter your comment!
Please enter your name here