ಸುಂದರ್ ರೈ ಮಂದಾರ ನಿರ್ದೇಶನದ “ಚಿ.ಸೌ ಸುಮಂಗಲ” ತುಳು ನಾಟಕಕ್ಕೆ ಮುಹೂರ್ತ

0

ಧರ್ಮಸ್ಥಳ: ರಂಗ್ ದ ರಾಜೆ ಸುಂದರ್ ರೈ ಮಂದಾರ ಇವರ ನಿರ್ಮಾಣ ನಿರ್ದೇಶನ ಅಭಿನಯದಲ್ಲಿ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ ಅಭಿನಯಿಸುವ ಅಮ್ಮ ತಂಡ ಕುಡ್ಲ ಅಭಿನಯಿಸುವ ಈ ವರ್ಷದ ನೂತನ ನಾಟಕ ಚಿ.ಸೌ ಸುಮಂಗಲ ಇದರ ಶುಭ ಮುಹೂರ್ತವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಡೆಯವರಿಂದ ಜು.6ರಂದು ನೆರವೇರಿತು.

ಈ ವೇಳೆ ಈ ನಾಟಕಕ್ಕೆ ಹೆಗ್ಗಡೆಯವರು ಶುಭ ಹಾರೈಸಿ,ಕಲಾವಿದರನ್ನು ಶ್ಲಾಘಿಸಿದರು.‌ಮುಹೂರ್ತದ ವೇಳೆ,ಸುಂದರ್ ರೈ ಮಂದಾರ, ಕಲಾವಿದರಾದ ದಿನೇಶ್ ಕೋಡಪದವು, ಪ್ರಜ್ವಲ್ ಗುರುವಾಯನಕೆರೆ, ತಂಡದ ಸಲಹೆಗಾರ ಶಿವಕುಮಾರ್ ಬಾರಿತ್ತಾಯ ಬೆಳಾಲ್, ಹೇಮಾಕ್ಷ ಸುವರ್ಣ ಪುತ್ತೂರು, ಸುಧಾಕರ್ ಪಡೀಲ್ ಪುತ್ತೂರು, ಸೋಮನಾಥ್ ಶೆಟ್ಟಿ ಮಂಗಲ್ಪಾಡಿ, ಅರುಣ್ ಚಂದ್ರ ಬಿಸಿರೋಡ್,ಮಲ್ಲಿಕ ಎಸ್ ರೈ ಮಂದಾರ, ದೇವದಾಸ್ ಕಜೆಕಾರ್,ಸುಶಾನ್ ಬಿ ಸಿರೋಡ್, ರಂಜನ್ ಬೋಳೂರು, ಸಂಗೀತ ನಿರ್ದೇಶಕ ಶ್ರೇಯಸ್ ಭಟ್ ಕಲ್ಲಡ್ಕ, ಜೂನಿಯರ್ ಬೋಳಾರ್ ಜಗನಿವಾಸ್ ಶೆಟ್ಟಿ ಮಂಗಲ್ಪಾಡಿ, ಪೂರ್ಣಿಮಾ ಸುರತ್ಕಲ್, ಡಾ.ಶ್ರೇಯ ಶೆಟ್ಟಿ ಉಡುಪಿ, ಸುರೇಶ್ ಸರಪಾಡಿ,ಜೆಪಿ ಕೊರಂಗಿಬೆಟ್ಟು, ಸೋಮನಾಥ್ ಶೆಟ್ಟಿ ಸೇರಿದಂತೆ ನಾಟಕದ ಕಲಾವಿದರು ಉಪಸ್ಥಿತರಿದ್ದರು. ಧರ್ಮಾಧಿಕಾರಿಗಳ ಆಪ್ತ ಕಾರ್ಯದರ್ಶಿ ವೀರೂ ಶೆಟ್ಟಿ, ಉದ್ಯಮಿ ಸಂದೀಪ್ ರೈ ಧರ್ಮಸ್ಥಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here