







ವಿಟ್ಲ: ಕಳ್ಳತನ ಪ್ರಕರಣವೊಂದರ ಆರೋಪಿಯಾಗಿದ್ದು 3 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.


ಬೆಳ್ತಂಗಡಿ ನಿವಾಸಿ ರಾಜೇಶ್ (41ವ.)ಬಂಧಿತ. 2018ರಲ್ಲಿ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವೊಂದರ ಆರೋಪದಲ್ಲಿ ಈತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 379 ಐಪಿಸಿಯಡಿಯಲ್ಲಿ ಪ್ರಕರಣ(ಅ.ಕ್ರ.ನಂ:204/2018)ದಾಖಲಾಗಿದ್ದು ಆರೋಪಿಯು ಕಳೆದ ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ ಆತನ ವಿರುದ್ಧ ವಾರಂಟ್ ಜಾರಿಯಾಗಿತ್ತು. ವಿಟ್ಲ ಠಾಣಾ ಎಎಸ್ಐ ಜಯರಾಮ್,ಕಾನ್ಸ್ಟೇಬಲ್ಗಳಾದ ವೆಂಕಪ್ಪ ಹಾಗೂ ಶಿವಾನಂದ ಎಂಬವರು ಆರೋಪಿಯನ್ನು ಜು.6ರಂದು ಮಂಗಳೂರಿನಲ್ಲಿ ದಸ್ತಗಿರಿ ವೆಂಕಪ ಹಾಗೂ ಮಾಡಿ.ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.













