







ವಿಟ್ಲ: ರಸ್ತೆ ಬದಿ ರಾತ್ರಿ ವೇಳೆ ನಿಲ್ಲಿಸಿದ್ದ ವಾಹನಗಳ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ವಿಟ್ಲ ಠಾಣಾ ಪೊಲೀಸರು ಅವರ ಬಳಿ ಇದ್ದ 10 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.


ಕಾಸರಗೋಡು ಜಿಲ್ಲೆಯ ಚೆರ್ಕಳ ನಿವಾಸಿ ಅಬ್ದುಲ್ ಶಮೀರ್ ಪಿ.ಎ. (50 ವ.) ಹಾಗೂ ಕಾಸರಗೋಡು ಜಿಲ್ಲೆಯ ಮುಟ್ಟತೋಡಿ ನಿವಾಸಿ ಅಬ್ದುಲ್ ಮಜಿದ್ (33 ವ.) ಬಂಧಿತ ಆರೋಪಿಗಳು.



ಬಂಧಿತರ ಮೇಲೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಸಮಯ ನಿಲ್ಲಿಸಿದ್ದ ಲಾರಿಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿದ ಆರೋಪದಲ್ಲಿ 5 ಪ್ರಕರಣಗಳು (ಆಕ್ರ: 38/2025,39/2026,41/2026,123/2026 126/2026)ದಾಖಲಾಗಿದೆ . ಕಾಸರಗೋಡಿನಿಂದ ವಾಹನಗಳಲ್ಲಿ ಬರುತ್ತಿದ್ದ ತಂಡ ವಾಹನಗಳ ಬ್ಯಾಟರಿ ಕಳವು ಮಾಡಿ ಆ ಬಳಿಕ ಪರಾರಿಯಾಗುತ್ತಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೃತ್ಯ ಎಸಗಿದವರ ಬೆನ್ನು ಹತ್ತಿದ ಪೊಲೀಸರು ಆರೋಪಿಗಳನ್ನು ಕಾಸರಗೋಡಿನಲ್ಲಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.










