







ಅರಿಯಡ್ಕ: ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿಯಾದ ಬಿ ವಿ ಸಿಂಚನ ಅವರು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK), ಕೃಷಿ ವಿಶ್ವವಿದ್ಯಾಲಯದಿಂದ ಅನುವಂಶೀಯ ಹಾಗು ಸಸ್ಯತಳಿ ಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಮುಡಿಗೇರಿಸಿಕೊಂಡಿದ್ದಾರೆ.


ಡಾ. ಬಿ .ವಿ ಸಿಂಚನ ಅವರು ಪ್ರೊ. ಎಸ್. ರಮೇಶ್ ಅವರ ಮಾರ್ಗದರ್ಶನದಲ್ಲಿ ಹಾಗಲಕಾಯಿ (Bittergourd) ಮಿಶ್ರತಳಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅತ್ಯುತ್ತಮ ಪ್ರಬಂಧವನ್ನು ಮಂಡಿಸಿದ್ದಾರೆ. ತನ್ನ ಕಠಿಣ ಪರಿಶ್ರಮದ ಮೂಲಕ CSIR- Lifesciences ನಿಂದ ಪ್ರತಿಷ್ಠಿತ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.



ಇವರ ಐದು ಪ್ರಮುಖ ಹಾಗು ಆರು ಇತರ ಸಂಶೋಧನಾ ಲೇಖನಗಳು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಾನ್ಯತೆಯ SCI ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಈಕೆಗೆ ಪಿ.ಜಿ. ಸೈನ್ಸ್ ವೀಕ್ (2024) ಅತ್ಯುತ್ತಮ ಮೌಖಿಕ ಪ್ರಸ್ತುತಿ (Best oral presentor) ಪ್ರಶಸ್ತಿ ಲಭಿಸಿದೆ. ಇದುವರೆಗೂ ನವದೆಹಲಿಯ IARI ಹಾಗೂ ವಾರಣಾಸಿಯ BHU ಸೇರಿದಂತೆ ಒಟ್ಟು ಏಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿ ಗಮನ ಸೆಳೆದಿದ್ದಾರೆ. ಜೊತೆಗೆ ರಾಷ್ಟ್ರೀಯ ಮಟ್ಟದ ಯುವ ಸಮ್ಮೇಳನದಲ್ಲೂ ಭಾಗವಹಿಸಿ University Blue ಆಗಿರುವ ಇವರು ಅರ್ಹತಾ ಪರೀಕ್ಷೆಗಳಾದ CSIR-Lifesciences NET & JRF, K-CET ಹಾಗೂ ASRB-NET ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುತ್ತಾರೆ.
ಈಕೆ ನಿವೃತ್ತ ಯೋಧ ವಿಶ್ವನಾಥ ಬಿ ಹಾಗೂ ಪ್ರೇಮಲತಾ ಪುತ್ರಿ, ಬಾಳ್ತಿಕುಮೇರು ದಿ। ರಾಮಣ್ಣ ಗೌಡ, ಶೇಣಿ ಲಿಂಗಪ್ಪ ಗೌಡರ ಮೊಮ್ಮಗಳು. ಈಕೆ ಸದ್ಯ ಸ್ವಿಟ್ಜರ್ಲ್ಯಾಂಡ್ ಮೂಲದ ಪ್ರಖ್ಯಾತ ಮಲ್ಟಿನ್ಯಾಷನಲ್ ಕಂಪೆನಿಯಾದ ಬೆಂಗಳೂರಿನ ಸಿಂಜೆಂಟಾ ಪ್ರೈವೇಟ್ ಲಿಮಿಟೆಡ್ (Syngenta private limited) ಸಂಸ್ಥೆಯಲ್ಲಿ ಅಸಿಸ್ಟೆಂಟ್ ಟ್ರೈಟ್ ಇಂಟ್ರೋಗ್ರೆಷನ್ ಸೈಂಟಿಸ್ಟ್ ( Assistant Trait Introgression Scientist) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.










