






ಪುತ್ತೂರು : ಧಾರವಾಡದ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ದಂತ ವೈದ್ಯಕೀಯ ವಿದ್ಯಾರ್ಥಿನಿ ದೀಕ್ಷಾ ದೇರ್ಕಜೆಯವರಿಗೆ ಬಿಡಿಎಸ್ ಪದವಿಯಲ್ಲಿ ಏಳು ಚಿನ್ನದ ಪದಕ ದೊರೆತಿದೆ.


ಓರ್ಥೋಡೊಂಟಿಕ್ಸ್, ಕನ್ಸರ್‌ವೇಟಿವ್ ಡೆಂಟಿಸ್ಟ್ರಿ ಆಂಡ್ ಎಂಡೋಡೊಂಟಿಕ್ಸ್, ಓರಲ್ ಸರ್ಜರಿ, ಪ್ರೋಸ್ಥೊಡೊಂಟಿಕ್ಸ್,ಪಿರೆಡೊಂಟಿಕ್ಸ್, ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ, ಓರಲ್‌ಪ್ಯಾಥೋಲಜಿ
ಎಂಬ ಏಳು ವಿಷಯದಲ್ಲಿ ಏಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ.



ಇತ್ತೀಚಿಗೆ ನಡೆದ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಏಳು ಚಿನ್ನದ ಪದಕದೊಂದಿಗೆ ಈಕೆ ಟಾಪರ್ & ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಎಂಬ ಕಾರಣಕ್ಕೆ ಮತ್ತೊಂದು ಚಿನ್ನದ ಪದಕವೂ ದೊರೆತಿದೆ.
ಇವರು ಪ್ರಸ್ತುತ ಪುತ್ತೂರಿನ ಸಿಪಿಸಿ ಬಿಲ್ಡಿಂಗ್ ನಲ್ಲಿರುವ ಡಾ. ಮಹೇಶ್ ರವರ ಆದರ್ಶ ದಂತ ಚಿಕಿತ್ಸಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕನಕಮಜಲು ಗ್ರಾಮದ ದೇರ್ಕಜೆಯ ಶ್ರೀರಾಮ್ ಭಟ್ ಮತ್ತು ರೇಖಾ ದಂಪತಿಗಳ ಪುತ್ರಿ.ಈಕೆ ಸುಳ್ಯದ ರೋಟರಿ ಪ್ರಾಥಮಿಕ ಶಾಲೆ, ಪುತ್ತೂರಿನ ಸೈಂಟ್ ವಿಕ್ಟರ್ಸ್ ಬಾಲಕಿಯರ ಪ್ರೌಢಶಾಲೆ ಹಾಗೂ ಅಂಬಿಕಾ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ.











Very well done. Thumba kruthajnathegalu