ಪುರುಷರಕಟ್ಟೆ ಘಟನೆ: ಗೌಡ ಸಂಘದಿಂದ ಯುವತಿ ಮನೆ ಭೇಟಿ – ಕಾನೂನು ಹೋರಾಟಕ್ಕೆ ಬೆಂಬಲ

0

ಪುತ್ತೂರು: ಯುವಕನೋರ್ವ ಚಾಕು ಹಿಡಿದುಕೊಂಡು ಮುಂದೆ ಹೋದ ಮತ್ತು ತಂಡದ ಜೊತೆ ವಾಹನವೊಂದರಲ್ಲಿ ತೆರಳಿ ಕುರಿತು ಇದನ್ನು ಗಮನಿಸಿದ ಯುವತಿಯೋರ್ವರು ತನ್ನ ಮೇಲೆ ದಾಳಿ ಮಾಡುವ ರೀತಿಯಲ್ಲಿ ಚಾಕು ತೋರಿಸಿ ವಾಹನವೊಂದರಲ್ಲಿ ಹಿಂಬಾಲಿಸಿರುವುದಾಗಿ ಆರೋಪಿಸಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದರೂ ಯುವಕರು ನೀಡಿದ ದೂರಿನಂತೆ ಯುವತಿಯ ಮೇಲೆಯೂ ಪ್ರಕರಣ ದಾಖಲಿಸಿರುವ ಕುರಿತ ವಿಚಾರಕ್ಕೆ ಸಂಬಂಧಿಸಿ ಒಕ್ಕಲಿಗ ಗೌಡ ಸೇವಾ ಸಂಘದ ಯುವತಿ ಮನೆಗೆ ತೆರಳಿ ಕಾನೂನು ಹೋರಾಟಕ್ಕೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.


ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು, ಕಾರ್ಯದರ್ಶಿಗಳಾದ ವಾರಿಜಾ ಬೆಳ್ಳಿಯಪ್ಪ ಗೌಡ, ಮೋಹನ ಬಾಳುಗೋಡು ಮತ್ತು ಯತೀಶ್ ದೇವ, ಮುಂಡೂರು ವಲಯ ಉಸ್ತುವಾರಿ ಭಾರತಿ ಕಾಡಮನೆ, ಮಹಿಳಾ ಘಟಕದ ಅಧ್ಯಕ್ಷೆ ಸಂಧ್ಯಾ ಶಶಿಧರ್ ದರ್ಬೆ, ಕಾರ್ಯದರ್ಶಿಗಳಾದ ಲೇಖ ಗೋವರ್ಧನ್, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಯಶೋಧ ಕೆ ಗೌಡ, ನಿಕಟ ಪೂರ್ವ ಕೋಶಾಧಿಕಾರಿಗಳಾದ ಶಿವರಾಮ ಮತಾವು, ಸಿಸಿಪಿ ಸಂಯೋಜಕ ಪ್ರಸನ್ನ ಕುಮಾರ್ ಡಿ.ಆರ್., ಮುಂಡೂರು ವಲಯದ ಯುವ ಘಟಕದ ಅಧ್ಯಕ್ಷ ಚಿದಾನಂದ ಶೇರಾಜೆ, ಶಾಂತಿಗೋಡು ಗ್ರಾಮದ ಊರ ಗೌಡರಾದ ದೇವಪ್ಪಗೌಡ, ಬಾಳಪ್ಪ ಕೆದ್ಕಾರ್ ಹಾಗೂ ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಸದಸ್ಯ ಯತೀಶ್ ಆರ್ವಾರ್ ಸೇರಿದಂತೆ ಸಮಾಜದ ಪ್ರಮುಖರು ಶಾಂತಿಗೋಡು ಗ್ರಾಮದ ಆನಡ್ಕ ವಾಲ್ತಾಜೆ ಶಾಂತಪ್ಪ ಗೌಡರ ಮನೆಗೆ ಭೇಟಿ ನೀಡಿ ಅವರ ಕುಟುಂಬ ವರ್ಗದವರಿಗೆ ಧೈರ್ಯ ತುಂಬಿ ಅವರ ಕಾನೂನು ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು.

LEAVE A REPLY

Please enter your comment!
Please enter your name here