







ಪುತ್ತೂರು: ಕೆದಂಬಾಡಿ ಗ್ರಾಮದ 186 ನೇ ಬೂತಿನಲ್ಲಿ ಎಸ್ಐಆರ್ ಬಗ್ಗೆ ಮಾಹಿತಿ ಕಾರ್ಯಗಾರ ಜು.12ರಂದು ಸಾರೆಪುಣಿಯಲ್ಲಿ ನಡೆಯಿತು.


ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕಾರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ರೈ, ಹಿರಿಯ ಕಾಂಗ್ರೆಸ್ ಮುಖಂಡ ಗಂಗಾಧರ್ ರೈ ಕುಯ್ಯಾರು, ವಲಯ ಉಪಾಧ್ಯಕ್ಷ ಅಬೂಬಕ್ಕರ್ ಸಾರಪುಣಿ, ಕೆದಂಬಾಡಿ ಗ್ರಾಪಂ ಮಾಜಿ ಸದಸ್ಯ ಮೇಲ್ವಿನ್ ಮೊಂತೆರೋ, ವಲಯ ಕಾರ್ಯದರ್ಶಿ ನೌಶಾದ್ ತಿಂಗಳಾಡಿ, ಸೋಮಯ್ಯ ತಿಂಗಳಾಡಿ, ಬೂತ್ ಅಧ್ಯಕ್ಷ ಹಬೀಬ್ ಕಣ್ಣೂರು, ಸುಧಾಕರ ಪಾಟಲಿ, ರಫೀಕ್ ತ್ಯಾಗರಾಜೆ, ಉಸ್ಮಾನ್ ಸಾರೆಪುಣಿ, ಇರ್ಷಾದ್ ಗಟ್ಟಮನೆ, ಮುಸ್ತಫ ಗಟ್ಟಮನೆ, ಲತೀಫ್ ಸಾರೆಪುಣಿ, ಸಯ್ಯದ್ ಕೊಟ್ರಾಸ್, ತಾಜುದ್ದಿನ್ ಸಾರೆಪುಣಿ, ಸುರೇಶ್ ಕೊಲ್ಲಾಜೆ, ನವೀದ್ ನಿಡ್ಯಾನ, ರೇಷ್ಮಾ ಮೇಲ್ವಿನ್, BLA ಇಕ್ಬಾಲ್ ಸಾರೆಪುಣಿ ಮತ್ತಿತರು ಉಪಸ್ಥಿತರಿದ್ದರು. ಅಶ್ರಫ್ ಸಾರೆಪುಣಿ ಸ್ವಾಗತಿಸಿದರು. ಬೂತ್ ಅಧ್ಯಕ್ಷ ಹೈದರ್ ಗಟ್ಟಮನೆ ವಂದಿಸಿದರು.













