ಸಹಕಾರಿ ವಾರ: ಕಡಬ ನೇರ್ಲ ಶಾಲೆಯಲ್ಲಿ ಪಿ.ಎಲ್.ಡಿ ಬ್ಯಾಂಕ್‌ನಿಂದ ಹಣ್ಣಿನ ಗಿಡ ನೆಡುವಿಕೆ

0

ಕಡಬ : ಕೇಂದ್ರ ಸರಕಾರದ ಸಹಕಾರಿ ಸಚಿವಾಲಯವು ಆರಂಭವಾಗಿ 5 ವರ್ಷ ಪೂರ್ಣ ಗೊಂಡಿರುವ ಹಿನ್ನಲೆಯಲ್ಲಿ ಪುತ್ತೂರು ಪಿ.ಎಲ್.ಡಿ ಬ್ಯಾಂಕ್ ನಿಂದ ಕಡಬ ತಾಲೂಕಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರ್ಲ, ಇಚ್ಲಂಪಾಡಿಯಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಸಹಕಾರಿ ವಾರ ಆಚರಣೆ ಮಾಡಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವಸಂತ ಬಿಜೇರು ವಹಿಸಿದ್ದರು.

ವೇದಿಕೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್ ಗೌಡ ಇಚ್ಲಂಪಾಡಿ, ಉಪಾಧ್ಯಕ್ಷರಾದ ಪ್ರವೀಣ್ ರೈ ಪಂಜೊಟ್ಟು, ನಿರ್ದೇಶಕರುರಾದ ವಿಕ್ರಂ ರೈ ಸಾಂತ್ಯ, ಕುಶಾಲಪ್ಪ ಗೌಡ ಅನಿಲ, ರಾಜುಮೋನ್, ಬಾಬು ಮುಗೇರ, ಕಸ್ಕಾರ್ಡ್ ಬ್ಯಾಂಕ್ ಬೆಂಗಳೂರು ಇದರ ಮಂಗಳೂರು ಶಾಖಾ ಕಚೇರಿಯ ಜಿಲ್ಲಾ ವ್ಯವಸ್ಥಾಪಕರಾದ ದಿಲೀಪ್ ಹೆಚ್.ಹೆಚ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಖೃತ, ಪ್ರಗತಿ ಪರ ಕೃಷಿಕ ಬ್ಯಾಂಕಿನ ಸದಸ್ಯ ಕೈಪ ಶ್ರೀ ಕೇಶವ ಭಂಡಾರಿ ಹಾಗೂ ಬ್ಯಾಂಕಿನ ವ್ಯವಸ್ಥಾಪಕಿ ಸುಮನ ಯಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಕೈಪ ಶ್ರೀ ಕೇಶವ ಭಂಡಾರಿ ಅವರು ತಮ್ಮ ಕೃಷಿ ಕ್ಷೇತ್ರದ ಸಾಧನೆಯ ಅಪಾರ ಅನುಭವಗಳನ್ನು ಹಂಚಿಕೊಳ್ಳುತ್ತಾ , ಕೃಷಿ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು.
ಬ್ಯಾಂಕಿನ ಸದಸ್ಯರುಗಳು ಮತ್ತು ಸಿಬ್ಬಂದಿ ವರ್ಗದವರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರುಗಳು,ಶಾಲಾ ಮುಖ್ಯೋಪಾಧ್ಯಾಯರಾದ ಡಾ.ಹೆಚ್.ಎಂ ಗಿರೀಶ್ , ಶಿಕ್ಷಕರು , ವಿಧ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲಾ ಮುಖ್ಯೋಪಾದ್ಯಾಯರಾದ ಡಾ.ಹೆಚ್.ಎಂ ಗಿರೀಶ್ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿ, ಬ್ಯಾಂಕಿನ ಲೆಕ್ಕಾಧಿಕಾರಿ ವಿನಯ ಕುಮಾರ್ ಕೆ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here