







ಜನರ ಮತದ ಹಕ್ಕನ್ನು ಕಾಪಾಡುವುದೇ ನಮ್ಮ ದ್ಯೇಯ- ಎಚ್ ಮಹಮ್ಮದ್ ಅಲಿ


ಪುತ್ತೂರು:ಚುನಾವಣೆ ಆಯೋಗ SIR ಪ್ರಕ್ರಿಯೆ ನಡೆಸುತ್ತಿದ್ದು ಜನರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ SIR ಪ್ರಕ್ರಿಯೆಯಲ್ಲಿ ಭಾಗವಹಿಸದೆ ಹಲವಾರು ಜನರ ಹೆಸರು ಮತಪಟ್ಟಿಯಿಂದ ಹೊರಗುಳಿಯುವ ಅಪಾಯವಿದ್ದು, ಜನರು ಯಾವ ಪಕ್ಷಕ್ಕೂ ಬೇಕಾದರೂ ಮತ ಹಾಕಲಿ ಅದು ಅವರಿಗೆ ಬಿಟ್ಟದ್ದು, ಆದರೆ ಯಾರ ಮತವೂ ಮತದಾರರ ಪಟ್ಟಿಯಿಂದ ಡಿಲೀಟ್ ಆಗಬಾರದು ಎಂಬುದೇ ನಮ್ಮ ಧ್ಯೇಯ. ಅದಕ್ಕಾಗಿ SIR ಬಗ್ಗೆ ಪಕ್ಷಾತೀತವಾಗಿ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ ಹಾಗೂ ನಮ್ಮ ಸಹಕಾರಿ ಸಂಘದ ಸರ್ವ ಸದಸ್ಯರ ಹಾಗೂ ಗ್ರಾಮಸ್ಥರ ಮತದ ಹಕ್ಕನ್ನು ಕಾಪಾಡುವ ಉದ್ದೇಶದಿಂದ ಈ ಮಾಹಿತಿ ಶಿಬಿರ ನಡೆಸಲಾಗಿರುತ್ತದೆ ಎಂದು ಆರ್ಯಾಪು ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ಹೇಳಿದರು.



ಜು.13 ರಂದು ಆರ್ಯಾಪು ಸಹಕಾರಿ ಸಂಘದ ಕಚೇರಿಯಲ್ಲಿ ಏರ್ಪಡಿಸಲಾದ SIR ಮಾಹಿತಿ ಕಾರ್ಯಾಗಾರದಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮಾತನಾಡಿದರು. ಚುನಾವಣೆ ಆಯೋಗ ಈಗಾಗಲೇ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ಮುಗಿಸಿದ್ದು ಅದರಲ್ಲಿ ಶೇಕಡಾ 90 ರಷ್ಟು ಮತದಾರರ ಹೆಸರು ಮ್ಯಾಪಿಂಗ್ ಆಗಿರುತ್ತದೆ. ಆದರೂ ಜನರಿಗೆ ತೊಂದರೆ ಕೊಡುವ ದುರುದ್ದೇಶದಿಂದ ಈ SIR ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದ ಜನರಿಗೆ ಅನಾವಶ್ಯಕ ಮಾನಸಿಕ ಹಿಂಸೆಯಾಗಿರುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಇನ್ನು ಮುಂದಕ್ಕೆ ವಿದ್ಯಾರ್ಥಿವೇತನ, ಜಾತಿ ಮತ್ತು ಆದಾಯ ದಾಖಲೆಗಳು, ಪೆನ್ಶನ್ ಗಳು ಸೇರಿ ಸರಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗುವ ಅಪಾಯವಿದೆ ಆದ ಕಾರಣ SIR ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಜನರಿಗೆ ಕರೆ ನೀಡಿದರು .

ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಗಾರವನ್ನು ಉದ್ಘಾಟಿಸಿದ SIR ತರಬೇತುದಾರರಾದ ಶ್ರೀಮತಿ ಅಮಿತಾ ಅಶ್ವಿನ್ ಉಳ್ಳಾಲ್ ರವರು ಸೇರಿದ ಜನರಿಗೆ SIR ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ. ನಿರ್ದೇಶಕರುಗಳಾದ ಸದಾನಂದ ಶೆಟ್ಟಿ ಕೂರೇಲು, ಇಸ್ಮಾಯಿಲ್ ಮಲಾರ್, ಗಣೇಶ್ ರೈ ಕುರಿಯ, ಸಂಶುದ್ದೀನ್ ನೀರ್ಕಜೆ, ತೆರೆಜಾ ಸಿಕ್ವೆರಾ, ಶಾಖಾ ವ್ಯವಸ್ಥಾಪಕಿ ಶುಭಾಶಿನಿ, ಸಿಬ್ಬಂದಿಗಳಾದ ಅರ್ಜುನ್ ಭಾಸ್ಕರ್, ಪ್ರಶಾಂತಿ, ವಿನಯ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು, ನಿರ್ದೇಶಕಿ ತೆರೆಜಾ ಸಿಕ್ವೆರಾರವರು ಅಮಿತಾ ಅಶ್ವಿನ್ ಉಳ್ಳಾಲ್ ರವರನ್ನು ಸಹಕಾರಿ ಶಾಲು ಹೊದಿಸಿ, ಹೂ ಗುಚ್ಚ ನೀಡಿ ಗೌರವಿಸಿದರು. ಸಿಬ್ಬಂದಿ ಉಮೇಶ್ ಎಸ್ ಕೆ ಕಾರ್ಯಕ್ರಮ ನಿರೂಪಿಸಿದರು.
ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗುವುದು…
ಸಂಪ್ಯದ ಕೇಂದ್ರ ಕಚೇರಿಯಲ್ಲಿ, ಕುರಿಯ ಸಹಕಾರಿ ಸಂಘದ ಶಾಖಾ ಕಚೇರಿಯಲ್ಲಿ SIR ಬಗ್ಗೆ ಹೆಲ್ಪ್ ಡೆಸ್ಕ್ ತೆರೆಯಲಾಗುವುದು ಹಾಗೂ ಕೂರ್ನಡ್ಕದಲ್ಲಿ ಈಗಾಗಲೇ SIR ಬಗ್ಗೆ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ. ಇಲ್ಲಿ ನಮ್ಮ ಸಿಬ್ಬಂದಿಗಳು ಎನುಮ್ಯುರೇಷನ್ ಫಾರಂ ಭರ್ತಿ ಮಾಡಲು ಸಹಾಯ ಮಾಡಲಿದ್ದಾರೆ. ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ.
ಎಚ್. ಮಹಮ್ಮದ್ ಅಲಿ
ಅಧ್ಯಕ್ಷರು, ಆರ್ಯಾಪು ಕೃಷಿ ಪತ್ತಿನ ಸಹಕಾರ ಸಂಘ










