







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಪ್ಪದ ದೀಪ ಬೆಳಗಿಸಿ ಪ್ರಾರ್ಥನೆ ಮಾಡಿ ತಮ್ಮ ಸಂಕಷ್ಟ ತೋಡಿಕೊಂಡವರು ಅದೇಷ್ಟೋ ಮಂದಿ ಇದ್ದಾರೆ. ಇತ್ತೀಚೆಗಷ್ಟೆ ತುಪ್ಪ ದೀಪ ಬೆಳಗಿಸಿ ಪ್ರಾರ್ಥಿಸಿದ ಬಳಿಕ ಚಿನ್ನದ ಸರ ಪತ್ತೆಯಾದ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಬೆಳ್ಳಿಯ ಸರ ಕಳೆದು ಕೊಂಡ ವೃದ್ಧ ದಂಪತಿಯು ಕೂಡಾ ತುಪ್ಪ ದೀಪ ಬೆಳಗಿಸಿ ಪ್ರಾರ್ಥಿಸಿ ಕಳೆದು ಹೋದ ಸರ ಪಡೆದುಕೊಂಡಿದ್ದಾರೆ.


ಅಡೂರು ಕೇಶವ ಕೇಕುಣ್ಣಾಯ ದಂಪತಿ ವಾರದ ಹಿಂದೆ ದೇವಸ್ಥಾನಕ್ಕೆ ಬಂದಿದ್ದರು ಈ ವೇಳೆ ಅವರ ಬೆಳ್ಳಿಯ ಸರ ಕಳೆದು ಹೋಗಿದೆ ಎಂದು ದೇವಳದ ಸಿ.ಸಿ ಕ್ಯಾಮರವನ್ನು ದೇವಳದ ಕಚೇರಿಯ ಅನುಮತಿಯೊಂದಿಗೆ ಪರಿಶೀಲಿಸಿದರು. ಈ ವೇಳೆ ಚಿನ್ನದ ಸರ ಪತ್ತೆಯಾಗಿರಲಿಲ್ಲ. ಈ ವಿಷಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಕಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಗಮನಕ್ಕೆ ಬಂದಾಗ ದಂಪತಿಯನ್ನು ದೇವಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ತುಪ್ಪ ದೀಪ ಬೆಳಗಿಸಿ ಪ್ರಾರ್ಥನೆ ಮಾಡಿಸಿದರು. ಜು.14ರಂದು ಕೇಶವ ಕೇಕುಣ್ಣಾಯ ಅವರು ದೇವಳಕ್ಕೆ ಬಂದು ಕಳೆದು ಹೋದ ಬೆಳ್ಳಿಯ ಸರ ಸಿಕ್ಕಿದೆ ಎಂದು ದೇವಳದ ಅಧ್ಯಕ್ಷರಲ್ಲಿ ತಿಳಿಸಿದ್ದಾರೆ. ಈ ನಡುವೆ ಮತ್ತೊಮ್ಮೆ ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿ ತೆರಳಿದರು. ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.













