







ಪುತ್ತೂರು: ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ಕೆದಂಬಾಡಿ ಇದರ ತ್ರೈಮಾಸಿಕ ಸಭೆಯು ಜು.12 ರಂದು ಇದ್ಯಪೆ ಸೀತಾರಾಮ ಗೌಡರವರ ಮನೆಯಲ್ಲಿ ಸೀತಾರಾಮ ಗೌಡ ಇದ್ಯಪ್ಪೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷರಾದ ಶಿವರಾಮ ಗೌಡ ಇದ್ಯಪ್ಪೆ, ಮೇಲ್ವಿಚಾರಕರಾದ ಸುಮಲತ, ಪ್ರೇರಕ ಚಂದನ್, ಕಾರ್ಯದರ್ಶಿ ಕಮಲಾಕ್ಷಿ, ಉಪಾಧ್ಯಕ್ಷರಾದ ನಿರ್ಮಲ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಆರ್.ಗೌಡ, ಕೋಶಾಧಿಕಾರಿ ಕೃಷ್ಣಪ್ಪ ಗೌಡ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.













