






ಪುತ್ತೂರು: ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಜು.15ರಂದು ಪುತ್ತೂರು ನ್ಯಾಯಾಲಯಕ್ಕೆ ಭೇಟಿ ನೀಡಿ ನ್ಯಾಯಾಲಯದ ಅನುಮತಿ ಮೇರೆಗೆ ಕೋರ್ಟ್ ಕಲಾಪದಲ್ಲಿ ಭಾಗವಹಿಸಿ ವೀಕ್ಷಿಸಿ ವಕೀಲರ ಸಂಘಕ್ಕೂ ಭೇಟಿ ನೀಡಿದರು.


ವಕೀಲ ವೃತ್ತಿ ಮತ್ತು ಅವಕಾಶಗಳ ಬಗ್ಗೆ ದೇಶದ ಅಭಿವೃದ್ಧಿಯಲ್ಲಿ ವಕೀಲರ ಪಾತ್ರದ ಕುರಿತು ಹಿರಿಯ ವಕೀಲರಾದ ರಾಮ್ಮೋಹನ್ ರಾವ್, ಪಿ.ಕೆ ಸತೀಶನ್, ಗೌರೀಶ್ಚಂದ್ರ ಶಾನ್ಬೋಗ್, ಭಾಸ್ಕರ್ ಕೋಡಿಂಬಾಳ, ಕೃಷ್ಣಪ್ರಸಾದ್ ರೈ, ಚಿನ್ಮಯ್ ರೈ ಮುಂತಾದ ವಕೀಲರೊಂದಿಗೆ ಸಂವಾದ ನಡೆಸಿದರು. ವಕೀಲೆ ಸ್ವಾತಿ ಆರ್ ರೈ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ಜಿ ರೈ ಮಕ್ಕಳನ್ನು ಬರಮಾಡಿಕೊಂಡು ಅವರಿಗೆ ಮಾರ್ಗದರ್ಶನ ನೀಡಿದರು.













