







ಆಲಂಕಾರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾದ ಮಾನ್ಯ ಬಿ ಫೌಜಿಯಾ ತರನ್ನುಮ್ (IAS) ರವರು ಜುಲೈ 16 ರಿಂದ ಜು 19 ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸದ ಅಂಗವಾಗಿ ಕಡಬ ತಾಲೂಕು ಆಲಂಕಾರು ಗ್ರಾಮ ಪಂಚಾಯತ್ ನ ಸ್ವಚ್ಛಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಪೈಕಿ ಆಲಂಕಾರು ಮಲ ತ್ಯಾಜ್ಯ ಸಂಸ್ಕರಣ ಘಟಕವನ್ನು ಪರಿಶೀಲಿಸಿ ನಂತರ ಮಾತನಾಡಿ ಜಲಜೀವನ್ ಮಿಷನ್,ಸ್ವಚ್ಚ ಭಾರತ್ ಮಿಷನ್,ಸಿಂಗಲ್ ವಿಲೇಜ್ ಸ್ಕೀಮ್,ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮಲ ತ್ಯಾಜ್ಯ ಸಂಸ್ಕರಣ ಘಟಕ,ನೀರು ಶುದ್ದೀಕರಣ ಘಟಕ ಪರೀಶಿಲನೆ ಮತ್ತು ನಿರ್ಮಾಣ, ನಿರ್ವಹಣೆ ಯ ಕುರಿತು ಪರಿಶೀಲನೆ ನಡೆಸಿ ಈ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.17 ರಂದು ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿ ಸಂಜೆ ಮಂಗಳೂರಿನ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಅಧಿಕಾರಿ ವರ್ಗದವರೊಂದಿಗೆ ಸಭೆ ನಡೆಸಿ ನಾಳೆ ಜು.18 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಮಾಡುವುದಾಗಿ ತಿಳಿಸಿದರು.




ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಮಾನ್ಯ ನರವಾಡೆ ವಿನಾಯಕ ಕಾರಭಾರಿ (IAS) ಮತ್ತು ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾದ ನವೀನ್ ಭಂಡಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಜಯಪ್ರಕಾಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿಯರ್ , ಸುರೇಶ್ , ಆಲಂಕಾರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಭರತ್ ಬಿ ಎಂ ,ಅಭಿವೃದ್ಧಿ ಅಧಿಕಾರಿ ಸುಜಾತ ಕೆ, ಸಹಾಯಕ ಇಂಜಿನಿಯರಾದ ಸಂಗಪ್ಪ ಹುಕ್ಕೇರಿ , ಕುಶಕುಮಾರ್ ನಡೆದ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು ಈ ಸಂಧರ್ಭದಲ್ಲಿ
ಜಿಲ್ಲಾ ಪಂಚಾಯತದ ನೈರ್ಮಲ್ಯ ಇಲಾಖೆಯ ಸಂಯೋಜಕರಾದ ನವೀನ್ .ಪವನ್ ಕುಮಾರ್ , ಕೊಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ ಕುಮಾರ್ , ರಾಮಕುಂಜ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಲಿತ ಜಿ.ಡಿ , ಆಲಂಕಾರು ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷೆ ಸುಶೀಲ ತಾಲೂಕು ಮಟ್ಟದ ಸಂಜೀವಿನಿ ಒಕ್ಕೂಟದ ಸಂಯೋಜಕರು , ಆಲಂಕಾರು ಸಂಜೀವಿನಿ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.ನಂತರ ಆಲಂಕಾರು ಘನ ತ್ಯಾಜ್ಯ ಘಟಕದ ಹತ್ತಿರ ಮಾವಿನ ಗಿಡ ನೆಟ್ಟು ಆಲಂಕಾರು ಗ್ರಾ.ಪಂ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬಂಟ್ವಾಳಕ್ಕೆ ಪ್ರವಾಸ ಕೈಗೊಂಡರು













