ಇಡ್ಕಿದು ಸೇವಾ ಸಹಕಾರಿ ಸಂಘದಿಂದ ವಿದ್ಯಾರ್ಥಿಗಳಿಗೆ ‘ವಿದ್ಯಾಮೃತ’ ವಿದ್ಯಾನಿಧಿ ವಿತರಣೆ

0

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘದ ವತಿಯಿಂದ ವರ್ಷಂಪ್ರತಿ ‘ವಿದ್ಯಾಮೃತ’ ಯೋಜನೆಯಡಿ ಕೊಡಲ್ಪಡುವ ವಿದ್ಯಾನಿಧಿ ಯನ್ನು ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಸಂಘದ ಅಧ್ಯಕ್ಷ ಸುಧಾಕರ್ ಶೆಟ್ಟಿ ಬೀಡಿನಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷರಾದ ರಾಮ್ ಭಟ್ ನೀರಪಳಿಕೆ, ನಿರ್ದೇಶಕರಾದ ಚಂದ್ರಹಾಸ ಕೆಂರ್ದೆಲು, ಜಯಂತ ಕಂಪ, ನವೀನ ಕೆ.ಪಿ. ಪಾಂಡೇಲು, ಹೃಷಿಕೇಶ್ ಮುಕ್ಕುಡ, ಉಮೇಶ ವಡ್ಯರ್ಪೆ, ಲೋಹಿತಾಶ್ವ ಎಂ. ಮುಂಡ್ರಬೈಲು, ಸತೀಶ ಕೆ. ಅಳಕೆಮಜಲು, ಆನಂದ ಕೆ. ಅಡ್ಯಾಲು, ಪದ್ಮಾವತಿ ಕುವೆತ್ತಿಲ.ವಿದ್ಯಾ ವಿ. ಮುದಲೆಗುಂಡಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ ಮೇಲಾಂಟ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಣಕ್ಕೆ ನೀಡುವ ನೆರವು ಸಮಾಜದ ಭವಿಷ್ಯಕ್ಕೆ ಮಾಡುವ ಹೂಡಿಕೆಯಾಗಿದೆ
ಶಿಕ್ಷಣವು ಸಮಾಜದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯಲು ನೆರವಾಗುವ ಉದ್ದೇಶದಿಂದ ಇಡ್ಕಿದು ಸೇವಾ ಸಹಕಾರಿ ಸಂಘವು ಪ್ರತಿ ವರ್ಷ ತನ್ನ ‘ವಿದ್ಯಾಮೃತ’ ಯೋಜನೆಯಡಿ 10 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸುತ್ತಿದೆ.
ಶಿಕ್ಷಣಕ್ಕೆ ನೀಡುವ ನೆರವು ಸಮಾಜದ ಭವಿಷ್ಯಕ್ಕೆ ಮಾಡುವ ಅತ್ಯುತ್ತಮ ಹೂಡಿಕೆಯಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯದ ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡುವಂತಾಗಲಿ.
ಸುಧಾಕರ್ ಶೆಟ್ಟಿ ಬೀಡಿನಮಜಲು
ಅಧ್ಯಕ್ಷರು
ಇಡ್ಕಿದು ಸೇವಾ ಸಹಕಾರಿ ಸಂಘ

LEAVE A REPLY

Please enter your comment!
Please enter your name here