







ಪುತ್ತೂರು ಮಾಯ್ ದೆ ದೇವುಸ್ ಹಿ.ಪ್ರಾ. ಶಾಲಾ ರಕ್ಷಕ-ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಜಯಂತ್ ಉರ್ಲಾಂಡಿ, ಮಕ್ಕಳ ಸುರಕ್ಷಾ ಸಮಿತಿಯ ಉಪಾಧ್ಯಕ್ಷೆಯಾಗಿ ರಮ್ಲತ್ ಎಂ. ಆಯ್ಕೆ
ಪುತ್ತೂರು: ಪುತ್ತೂರು ಮಾಯ್ ದೆ ದೇವುಸ್ ಹಿ.ಪ್ರಾ. ಶಾಲೆಯಲ್ಲಿ 2026-27ನೇ ಸಾಲಿನ ರಕ್ಷಕ-ಶಿಕ್ಷಕರ ಸಂಘದ ಸಮಿತಿ ರಚನೆಯು ಜು.17ರಂದು ಮಾಯ್ ದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಶಾಲಾ ಸಂಚಾಲಕರಾದ ಅ| ವಂ|ಡಾ| ಜೆ.ಬಿ ಸಲ್ಡಾನ್ಹಾರವರ ಅಧ್ಯಕ್ಷತೆಯಲ್ಲಿ, ಶಾಲಾ ಮುಖ್ಯ ಶಿಕ್ಷಕಿ ಜಾನೆಟ್ ಡಿಸೋಜರವರ ಉಪಸ್ಥಿತಿಯಲ್ಲಿ ಪ್ರಸಕ್ತ ವರ್ಷದ ರಕ್ಷಕ ಶಿಕ್ಷಕ ಸಂಘದ ನೂತನ ಸಮಿತಿ ರಚಿಸಲಾಯಿತು.


ಅಧ್ಯಕ್ಷರಾಗಿ ಶಾಲಾ ಸಂಚಾಲಕರಾದ ಅ| ವಂ|ಡಾ| ಜೆ.ಬಿ ಸಲ್ಡಾನ್ಹಾ, ಕಾರ್ಯದರ್ಶಿಯಾಗಿ ಮುಖ್ಯಶಿಕ್ಷಕಿ ಜಾನೆಟ್ ಡಿಸೋಜ, ಉಪಾಧ್ಯಕ್ಷರಾಗಿ ಜಯಂತ ಉರ್ಲಾಂಡಿ, ಜತೆಕಾರ್ಯದರ್ಶಿಯಾಗಿ ಲೋಲಾಕ್ಷ ಪಿ., ಮಕ್ಕಳ ಸುರಕ್ಷಾ ಸಮಿತಿಯ ಉಪಾಧ್ಯಕ್ಷೆಯಾಗಿ ರಮ್ಲತ್ ಎಂ. ರವರನ್ನು ಆಯ್ಕೆ ಮಾಡಲಾಯಿತು. ಸಂಘದ ಸದಸ್ಯರಾಗಿ ಯತೀಶ್ ಪೂಜಾರಿ, ಚಂದ್ರಕಾಂತ್ ಉರ್ಲಾಂಡಿ, ಅಬ್ದುಲ್ ಹಕೀಂ, ಯೋಗೀಶ್ ನಾಯ್ಕ, ಅಬ್ದುಲ್ ಲತೀಫ್, ನಸೀಮಾ, ಸ್ವಾತಿ, ಗೀತಾ ಪಿ, ಶೋಭ ವಿ., ಅಕ್ಷತಾ ಭಟ್, ನಮಿತ, ಸುಜಾತ, ಅಝೀಮಾರವರು ಸಮಿತಿಗೆ ಆಯ್ಕೆಯಾದರು.













