ಗೋಳಿತ್ತೊಟ್ಟು: ಕಾರು ಬೆಂಕಿಗಾಹುತಿ

0

ನೆಲ್ಯಾಡಿ: ಕಾರೊಂದು ಬೆಂಕಿಗಾಹುತಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪ ಜು.17ರಂದು ಸಂಜೆ ನಡೆದಿದೆ.


ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಗೋಳಿತ್ತೊಟ್ಟು ಶಿರಾಡಿಗುಡ್ಡೆ ಸಮೀಪ ತಲುಪುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿ ಚಾಲಕ ಮತ್ತು ಪ್ರಯಾಣಿಕರೊಬ್ಬರಿದ್ದು ಅಪಾಯದ ಅರಿವು ಆಗುತ್ತಿದ್ದಂತೆ ಕಾರು ನಿಲ್ಲಿಸಿ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್‌ಆರ್ ಕಂಪನಿಯವರ ಟ್ಯಾಂಕರ್ ಬರಮಾಡಿ ಅದರಿಂದ ನೀರು ಹಾಕಿ ಬೆಂಕಿ ನಂದಿಸಲಾಗಿದೆ. ಆದರೂ ಕಾರಿನ ಇಂಜಿನ್ ಇರುವ ಭಾಗ ಸಂಪೂರ್ಣ ಸುಟ್ಟುಹೋಗಿದೆ.

LEAVE A REPLY

Please enter your comment!
Please enter your name here