ಪುರುಷರಕಟ್ಟೆ ಘಟನೆ: ಯುವತಿಯ ಮೇಲೆ ಪ್ರಕರಣ ದಾಖಲು ಪ್ರಕರಣ – ಮಹಿಳಾ ಆಯೋಗಕ್ಕೆ, ರಾಜ್ಯ ಕಾನೂನು ಹಕ್ಕುಗಳ ಆಯೋಗಕ್ಕೆ ದೂರು

0

ಪುತ್ತೂರು: ಪುರುಷರಕಟೆ ಘಟನೆಯ ಸಂಬಂಧ ದೂರು ನೀಡಲು ಠಾಣೆಗೆ ತೆರಳಿದ್ದ ಸಂತ್ರಸ್ತ ಯುವತಿಯ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಸೂಕ್ತ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಮತ್ತು ಕರ್ನಾಟಕ ರಾಜ್ಯ ಕಾನೂನು ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.


ಮಾಜಿ ಶಾಸಕ ಸಂಜೀವ ಮಠಂದೂರು ಅವರ ನಿಯೋಗದಲ್ಲಿ ಯುವತಿಯ ತಂದೆ ಸಾಂತಪ್ಪ ಗೌಡ ಅವರ ಉಪಸ್ಥಿತಿಯಲ್ಲಿ ದೂರು ನೀಡಲಾಗಿದೆ. ಇದಲ್ಲದೆ ಕರ್ನಾಟಕ ರಾಜ್ಯದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ರವರಿಗೆ ಮತ್ತು ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ, ಟಿ, ನಾರಾಯಣಸ್ವಾಮಿಯವರಿಗೆ ಹಾಗು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೇಂದ್ರದ ರಾಜ್ಯ ಸಚಿವರಾದ, ಸಂಸದೆ ಶೋಭಾ ಕರಂದ್ಲಾಜೆಯವರಿಗೆ, ಮಾಜಿ ಮುಖ್ಯ ಮಂತ್ರಿಗಳು ಹಾಗು ಕೇಂದ್ರದ ಮಾಜಿ ಸಚಿವರಾದ ಡಿ.ವಿ. ಸದಾನಂದ ಗೌಡರವರಿಗೆ ಮನವಿ ಮಾಡಲಾಯಿತು. ‌

ಈ ಸಂದರ್ಭ ನಿಯೋಗದಲ್ಲಿ ಬಿಜೆಪಿ ಮುಖಂಡರು, ಪುತ್ತೂರು ಗ್ರಾಮಾಂತರ ಮಂಡಲದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಹಾಗು ಯುವತಿಯ ಚಿಕ್ಕಪ್ಪ ಪುರುಷೋತ್ತಮ ಮುಂಗ್ಲಿಮನೆ, ಯುವತಿಯ ತಂದೆ ಸಾಂತಪ್ಪ ಗೌಡ ವಾಲ್ತಾಜೆ, ಯುವತಿಯ ಮಾವ, ಕಬಕ ಬಿಜೆಪಿ ಶಕ್ತಿ ಕೇಂದ್ರದ ನಿಕಟಪೂರ್ವ ಪ್ರಮುಖ ಜಯರಾಮ ನೆಕ್ಕರೆ, ಹುಡುಗಿಯ ಭಾವ ಕೌಶಿಕ್ ಮಡಂತ್ಯಾರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here