ನೆಕ್ಕಿಲಾಡಿ: ನಮ್ಮೂರು-ನಮ್ಮವರು ಸಂಸ್ಥೆಯಿಂದ ನಾಮಫಲಕ ಅನಾವರಣ

0

ಪುತ್ತೂರು: ನಮ್ಮೂರು ನಮ್ಮವರು ಮೈಂದಡ್ಕ 34 ನೆಕ್ಕಿಲಾಡಿ ಸಂಘಟನೆಯ ವತಿಯಿಂದ ಆದರ್ಶನಗರದಿಂದ ದರ್ಬೆಯನ್ನು ಸಂಪರ್ಕಿಸುವ ಪ್ರಮುಖ ಸ್ಥಳ ಹಾಗೂ
ಊರಿನ ಹೆಸರನ್ನು ಸೂಚಿಸುವ ನಾಮಫಲಕ ಅನಾವರಣ ಕಾರ್ಯಕ್ರಮ ಮೈಂದಡ್ಕ ಮೈದಾನದಲ್ಲಿ ಜು.19ರಂದು ನಡೆಯಿತು.

ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಜಾನ್ ಕೆನ್ಯೂಟ್ ನಾಮಫಲಕ ಅನಾವರಣಗೊಳಿಸಿ ಶುಭ ಹಾರೈಸಿದರು. ನೆಕ್ಕಿಲಾಡಿ ಗ್ರಾಮ ಪಂಚಾಯತ್ ನಿಕಟಪೂರ್ವಾಧ್ಯಕ್ಷೆ ಸುಜಾತ ಆರ್. ರೈ, ನಿಕಟಪೂರ್ವ ಉಪಾಧ್ಯಕ್ಷ ಹರೀಶ್, ನೆಕ್ಕಿಲಾಡಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜೀವ, ನಮ್ಮೂರು ನಮ್ಮವರು ಸಂಘಟನೆಯ ಅಧ್ಯಕ್ಷ ಪುರುಷೋತ್ತಮ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here