







ನೆಲ್ಯಾಡಿ: ಆಲಂತಾಯ ಗ್ರಾಮದ ಬಟ್ಲಡ್ಕ ನಿವಾಸಿ, ನಿವೃತ್ತ ಮುಖ್ಯಶಿಕ್ಷಕ ಸಂಜೀವ ಪೂಜಾರಿ ಬಟ್ಲಡ್ಕ ಅವರ 75ನೇ ಹುಟ್ಟುಹಬ್ಬದ ಸವಿನೆನಪು ಹಾಗೂ ಸುಗಂಧಿ-ಸಂಜೀವ ದಂಪತಿಗಳ ವೈವಾಹಿಕ ಜೀವನದ 45ನೇ ವರ್ಷದ ಸಂಭ್ರಮಾಚರಣೆ ಜು.19ರಂದು ಆಲಂತಾಯ ಬಟ್ಲಡ್ಕ ’ ಶ್ರೀ ಸದ್ಗುರು ’ ಮನೆಯಲ್ಲಿ ವಿಜ್ರಂಭಣೆಯಿಂದ ನಡೆಯಿತು.


ಸಂಜೀವ ಪೂಜಾರಿ ಅವರ ಹಿರಿಯ ಸಹೋದರಿ ಗಿರಿಜ ನೈಯ್ಯಲ್ಗ ಅವರು ದೀಪ ಪ್ರಜ್ವಲಿಸಿದರು. ದಂಪತಿಗಳು ಹಾರಾರ್ಪಣೆ ಮಾಡಿಕೊಂಡು 45ನೇ ವರ್ಷದ ವೈವಾಹಿಕ ಜೀವನದ ಸಂಭ್ರಮಾಚರಣೆ ಆಚರಿಸಿಕೊಂಡರು. ಕೇಕ್ ಕಟ್ ಮಾಡುವ ಮೂಲಕ ಸಂಜೀವ ಪೂಜಾರಿಯವರ 75ನೇ ಹುಟ್ಟುಹಬ್ಬ ಆಚರಿಸಿಕೊಂಡರು. ದಂಪತಿಗೆ ಆರತಿ ಬೆಳಗಲಾಯಿತು. ಬಳಿಕ ನಿವೃತ್ತ ಶಿಕ್ಷಕ ರಘು ನೈಯ್ಯಲ್ಗ ಅವರು ಮಾತನಾಡಿ, ದಿ.ಮೋನಪ್ಪ ಪೂಜಾರಿ-ಮುತ್ತಕ್ಕ ದಂಪತಿಯ ಹಿರಿಯ ಪುತ್ರರಾದ ಸಂಜೀವ ಪೂಜಾರಿಯವರು 30 ವರ್ಷ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಪತ್ನಿ ಸುಗಂಧಿ ಅವರು ಮಾರ್ಕಾಜೆ ದಿ.ಅಣ್ಣಿಪೂಜಾರಿ-ಕಮಲ ದಂಪತಿಯ ಹಿರಿಯ ಪುತ್ರಿ. ಅವರು 36 ವರ್ಷ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ನಿವೃತ್ತಿಯ ಬಳಿಕ ಇವರಿಬ್ಬರು ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಕೊಂಡು ಚಟುವಟಿಕೆಯಲ್ಲಿದ್ದಾರೆ. ಮೂವರು ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ನೀಡಿದ್ದಾರೆ. ಸಂಜೀವ ಪೂಜಾರಿಯವರು ಸಾರ್ವಜನಿಕ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಗ್ರಾಮ ಸಮಿತಿ ಹಳೆನೇರೆಂಕಿ, ಪುತ್ತೂರು ಬಿಲ್ಲವ ಸಂಘ, ಹಳೆನೇರೆಂಕಿಯ ಕಾರ್ಣಿಕ ಕ್ಷೇತ್ರ ಕೊಡಮಣಿತ್ತಾಯ ಕೋಟಿ ಚೆನ್ನಯ ಗರಡಿ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘ ಸೇರಿದಂತೆ ಹಲವು ಸಂಘಟನೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಳೆನೇರೆಂಕಿ ಬಿಲ್ಲವ ಗ್ರಾಮ ಸಮಿತಿಗೆ ಸ್ವಂತ ನಿವೇಶನ ಖರೀದಿ ಮತ್ತು ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು, ತನ್ನ ತಂದೆ-ತಾಯಿ ಸ್ಮರಣಾರ್ಥ ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದಲ್ಲಿ ನಿರಖು ಠೇವಣಿ ಇರಿಸಿ ಅದರಲ್ಲಿ ವಾರ್ಷಿಕವಾಗಿ ಸಿಗುವ ಬಡ್ಡಿಯ ಹಣವನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕೆಗಾಗಿ ವಿದ್ಯಾರ್ಥಿ ವೇತನವನ್ನು ಪ್ರತಿವರ್ಷವೂ ನೀಡುತ್ತಿದ್ದಾರೆ. ಸಂಜೀವ ಪೂಜಾರಿ-ಸುಗಂಧಿ ದಂಪತಿಯದ್ದು ನಿಷ್ಕಲ್ಮಶ ಮನಸ್ಸು, ನೇರ ನುಡಿ. ಎಲ್ಲರಿಗೂ ಆದರ್ಶ ದಂಪತಿ ಎಂದು ಹೇಳಿದರು. ಶಿಕ್ಷಕರಾದ ವಸಂತಿ, ದಯಾನಂದ ಓಡ್ಲ, ಸತೀಶ್ ಮಾರ್ಕಾಜೆ ಅವರು ಸಂದರ್ಭೋಚಿತವಾಗಿ ಮಾತನಾಡಿ ದಂಪತಿಗೆ ಶುಭಹಾರೈಸಿದರು.




ಹುಟ್ಟುಹಬ್ಬ ಆಚರಿಸಿಕೊಂಡ ಸಂಜೀವ ಪೂಜಾರಿ ಅವರು ಮಾತನಾಡಿ, ಪತ್ರಿಕೆಯಲ್ಲಿ ಹಿರಿಯರೊಬ್ಬರ 76ನೇ ಹುಟ್ಟುಹಬ್ಬ, 46ನೇ ವೈವಾಹಿಕ ಜೀವನದ ಸಂಭ್ರಮದ ಸುದ್ದಿ ಪ್ರಕಟಗೊಂಡಿತ್ತು. ಇದನ್ನು ನೋಡಿ ನಾನೂ 75ನೇ ಹುಟ್ಟುಹಬ್ಬ, 45ನೇ ವೈವಾಹಿಕ ಜೀವನದ ಸಂಭ್ರಮ ಆಚರಿಸಲು ನಿರ್ಧರಿಸಿ ಸಹೋದರರು, ಬಾವಂದಿರ ಜೊತೆ ಸಮಾಲೋಚಿಸಿದಾಗ ಅವರೂ ಒಪ್ಪಿಗೆ ಸೂಚಿಸಿದರು. ಇದೊಂದು ಸಂಭ್ರಮ, ಸಂತೋಷದ ವಿಚಾರವಾಗಿದೆ. ಆಗಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಡಾ.ಹರ್ಷಿತಾ ಪ್ರಾರ್ಥಿಸಿದರು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಪುಷ್ಪಾ ಎಸ್.ರೈ, ಪುತ್ತೂರು ಅಕ್ಷಯ ಕಾಲೇಜಿನ ಸಂಸ್ಥಾಪಕ ಜಯಂತ ನಡುಬೈಲು, ಉಪ್ಪಿನಂಗಡಿಯ ವೈದ್ಯ ಡಾ.ರಾಜಾರಾಮ್ ಕೆ.ಬಿ., ಉದ್ಯಮಿ ವರದರಾಜ್ ಉಪ್ಪಿನಂಗಡಿ, ಆಲಂಕಾರು ಮೂರ್ತೆದಾರರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೋಗೀಶ್ ಅಗತ್ತಾಡಿ, ನಿರ್ದೇಶಕರಾದ ಜಯಕರ ಪೂಜಾರಿ ಕಲ್ಲೇರಿ, ಸಂತೋಷ್ಕುಮಾರ್ ಎಂ.ಮತ್ರಾಡಿ, ಗಂಗಾರತ್ನ ವಸಂತ ಅಗತ್ತಾಡಿ, ಜಯಂತಪೂಜಾರಿ ನೆಕ್ಕಿಲಾಡಿ, ಆನಂದ ಪೂಜಾರಿ ಮಠದಬೈಲು, ಲಕ್ಷ್ಮೀಶ ಬಂಗೇರ ಪೆಲತ್ತೋಡಿ, ವಿಜಯ ಅಂಬಾ, ವಾಸಪ್ಪ ಪೂಜಾರಿ ಕೇಪುಲು, ಹಳೆನೇರೆಂಕಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಬರೆಂಬೆಟ್ಟು, ನಿವೃತ್ತ ಮುಖ್ಯಶಿಕ್ಷಕರಾದ ಗುಮ್ಮಣ್ಣ ಗೌಡ ರಾಮಕುಂಜ, ರೇವತಿ ಗುಮ್ಮಣ್ಣ ಗೌಡ, ಸಾಂತಪ್ಪ ಗೌಡ, ರಾಮಕುಂಜ ಗ್ರಾ.ಪಂ.ಮಾಜಿ ಅಧ್ಯಕ್ಷೆ ಮಾಲತಿ ಕದ್ರ, ಸ್ಥಳೀಯ ಪ್ರಮುಖರಾದ ಪ್ರಶಾಂತ ರೈ ಅರಂತಬೈಲು, ಡಾ.ಸದಾನಂದ ಕುಂದರ್ ನೆಲ್ಯಾಡಿ, ಅನಿತಾ ವಿಶ್ವನಾಥ ಪೂಜಾರಿ ಮಾರ್ಕಾಜೆ, ಸವಿತಾ ಮಾರ್ಕಾಜೆ, ರವಿಚಂದ್ರ ಮಾರ್ಕಾಜೆ, ಮೀನಾ ಮಾರ್ಕಾಜೆ, ಸದಾನಂದ ಧರ್ಮಸ್ಥಳ, ಲೀಲಾವತಿ ಧರ್ಮಸ್ಥಳ, ಧರ್ಮಪಾಲ ಮಂಗಳೂರು, ಲಲಿತ ಮಂಗಳೂರು, ಮೋನಮ್ಮ ಮರಕ್ಕಡ, ಸಂತೋಷ್ಕುಮಾರ್ ಮರಕ್ಕಡ, ರತ್ನಾವತಿ ಪಡ್ಪು ಕಾವಳಮುಡೂರು, ಚಂದ್ರಾವತಿ ಶಿರ್ಲಾಲು, ಯಶೋಧ, ವಿಶ್ರಾಂತ ಮುಖ್ಯಗುರು ಮಾಲಪ್ಪ ಪೂಜಾರಿ, ವಿಶಾಲಾಕ್ಷಿ ನೈಯ್ಯಲ್ಗ, ಹೇಮಾವತಿ, ರಾಮಣ್ಣಪೂಜಾರಿ, ಮೋಹಿನಿ, ಅಣ್ಣಿಪೂಜಾರಿ, ಸರೋಜಿನಿ, ಜನಾರ್ದನ ಸಬಳೂರು, ಮೂರ್ಜೆ ಹೇಮಂತ್ ಗ್ರಾನೈಟ್ನ ಹೇಮಂತ್, ವಿಶಾಲಾಕ್ಷಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ನಿತ್ಯಾನಂದ, ಜನಾರ್ದನ ಬಾಣಜಾಲು, ನೇಮಣ್ಣ ಪೂಜಾರಿ ಪಾಲೇರಿ, ಕೊರಗಪ್ಪ ಪೂಜಾರಿ ಕಲ್ಲುಗುಡ್ಡೆ, ಡೀಕಯ್ಯ ಪೂಜಾರಿ ಕರಾಯ, ಭಾಸ್ಕರ ಪೂಜಾರಿ ಬರೆಂಬೆಟ್ಟು, ಉದಯಪೂಜಾರಿ ಬಟ್ಲಡ್ಕ ಸಹಿತ ದಂಪತಿಯ ಸಂಬಂಧಿಕರು, ಹಿತೈಷಿಗಳು, ವಿವಿಧ ಶಾಲೆಗಳ ಶಿಕ್ಷಕರು, ನಿವೃತ್ತ ಶಿಕ್ಷಕರು, ನೆರಿಯ ಜಲವಿದ್ಯುತ್ ಸ್ಥಾವರದ ಸಿಬ್ಬಂದಿಗಳು, ಬಂಧುಗಳು ಆಗಮಿಸಿ ಶುಭ ಹಾರೈಸಿದರು.

ಸಂಜೀವ ಪೂಜಾರಿ-ಸುಗಂಧಿ ದಂಪತಿ ಪುತ್ರರಾದ ಸುನಿಲ್, ಸುಚೇತಾ, ಸುಜಿತ್, ಅಳಿಯ ಪ್ರದೀಪ್ ನೆಕ್ಕಲಬೈಲು, ಸೊಸೆಯಂದಿರಾದ ಭವ್ಯಶ್ರೀ, ರಕ್ಷಿತಾ, ಮೊಮ್ಮಕ್ಕಳಾದ ಹರ್ಷಪ್ರಿಯ, ಬೇಬಿ ತಶ್ವಿಕಾ, ಅದ್ವೈತ್, ಸಾಮ್ರಾಟ್ ಹಾಗೂ ಬಟ್ಲಡ್ಕ ಕುಟುಂಬಸ್ಥರು ಸಹಕರಿಸಿದರು. ಮಧ್ಯಾಹ್ನ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ವಿಶ್ವಾಸ್ ಗುರುಪುರ ಹಾಗೂ ಮಲ್ಲಿಕಾವಿಶ್ವಾಸ್ ಅವರು ವಿವಿಧ ಕನ್ನಡ, ತುಳು ಗೀತೆಗಳ ಮೂಲಕ ಮನರಂಜಿಸಿದರು. ದಿನೇಶ್ ಸುವರ್ಣ ರಾಯಿ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿಬಂತು. ತುಳುನಾಡಿನಲ್ಲಿ ಮದುವೆಯ ಹಿಂದಿನ ಸಂಪ್ರದಾಯ ಮತ್ತು ಅದರ ಉದ್ದೇಶ, ಕ್ರಮದ ಬಗ್ಗೆ ದಿನೇಶ್ ರಾಯಿ ಅವರು ತಿಳಿಸಿದರು. ಹಳೆನೇರೆಂಕಿ ಬಿಲ್ಲವ ಗ್ರಾಮ ಸಮಿತಿಯಿಂದ ಸಮಿತಿಯ ಪದಾಧಿಕಾರಿಗಳು ಸಂಜೀವ-ಸುಗಂಧಿ ದಂಪತಿಯನ್ನು ಗೌರವಿಸಿದರು.










