ವಿವೇಕಾನಂದ ಶಿಶುಮಂದಿರದ 28 ನೇ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಸಮಿತಿಗೆ ಆಯ್ಕೆ

0

ಗೌರವಾಧ್ಯಕ್ಷ ಪ್ರಸನ್ನ ದರ್ಬೆ, ಅಧ್ಯಕ್ಷ ಹರ್ಷ ಕುಮಾರ್ ರೈ, ಕಾರ್ಯದರ್ಶಿ ಬ್ರಿಜೇಶ್ ರೈ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿ ನಡೆಯುತ್ತಿರುವ ವಿವೇಕಾನಂದ ಶಿಶುಮಂದಿರದ 28ನೇ ಶ್ರೀಕೃಷ್ಣಲೋಕ ಕಾರ್ಯಕ್ರಮ ಸಮಿತಿ ರಚನೆಯಾಗಿದ್ದು ಪ್ರಸನ್ನ ದರ್ಬೆ ಅವರು ಗೌರವಾಧ್ಯಕ್ಷರಾಗಿ ಮತ್ತು ಹರ್ಷ ಕುಮಾರ್ ರೈ ಮಾಡಾವು ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


ಶಿವಪೇಟೆ ಪರ್ಲಡ್ಕದಲ್ಲಿರುವ ವಿವೇಕಾನಂದ ಶಿಶು ಮಂದಿರದಲ್ಲಿ ಜು.16ರಂದು ನಡೆದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸಮಿತಿ ರಚಿಸಲಾಗಿದೆ. ಕಾರ್ಯದರ್ಶಿಯಾಗಿ ಬ್ರಿಜೇಶ್ ರೈ ಸಣಂಗಳ, ಜೊತೆ ಕಾರ್ಯದರ್ಶಿಯಾಗಿ ಅಜಿತ್ ರೈ ಹೊಸಮನೆ, ಕೋಶಾಧಿಕಾರಿಯಾಗಿ ರಕ್ಷಾ ಎಸ್.ಆರ್‌ರವರನ್ನು ಆಯ್ಕೆ ಮಾಡಲಾಗಿದೆ. ಸದಸ್ಯರಾಗಿ ರಾಜೇಶ್ ಟಿ, ಸುದೀಪ್, ರಮ್ಯ ಭಟ್, ಆನಂದ ನಾಯಕ್, ಪ್ರಜ್ಞಾ ಎಂರವರನ್ನು ಆಯ್ಕೆ ಮಾಡಲಾಗಿದೆ.

ಶ್ರೀಕೃಷ್ಣ ಲೋಕದ ನಿಕಟಪೂರ್ವ ಅಧ್ಯಕ್ಷ ಮೋಹನ್ ಕೆ, ಉಪಾಧ್ಯಕ್ಷೆ ಮಾಲಿನಿ ಕಶ್ಯಪ್, ಶಿಶುಮಂದಿರದ ಅಧ್ಯಕ್ಷ ರಾಜಗೋಪಾಲ್ ಭಟ್, ಸಂಚಾಲಕ ಅಕ್ಷಯ್ ಕುಮಾರ್, ಆಡಳಿತ ಮಂಡಳಿಯ ಸದಸ್ಯರು, ಮಾತಾಜಿಯವರು ಹಾಗೂ ಪಾಲಕರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here