ಬೆಥನಿ ಐಟಿಐ ನೆಲ್ಯಾಡಿ ಯಲ್ಲಿ ವೃತ್ತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ

0

ನೆಲ್ಯಾಡಿ : ಬೆಥನಿ ಐಟಿಐ ಸಂಸ್ಥೆಯಲ್ಲಿ ವೃತ್ತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆ. ಫಾ. ವರ್ಗೀಸ್ ಕೈಪನಡುಕ್ಕ ಓಐಸಿ ಇವರು ವಹಿಸಿ, “ಕೌಶಲ್ಯವೇ ಶಕ್ತಿ” ಎಂಬ ಸಂದೇಶವನ್ನು ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಣಾಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ರಮಣಿ ಬಿ. ಮಾತನಾಡಿ, “ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ರೆ. ಫಾ. ಸ್ಯಾಮುವೆಲ್ ಜಾರ್ಜ್, ಓಐಸಿ, ಪ್ರಾಂಶುಪಾಲರಾದ ಸಜಿ ಕೆ. ತೋಮಸ್, ತರಬೇತಿ ಅಧಿಕಾರಿ ಜಾನ್ ಪಿ. ಎಸ್. ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿ ಜಾನ್ಸನ್ ಉಪಸ್ಥಿತರಿದ್ದರು.

ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಾರ್ಥಸಿದರು.ಜಾನ್ ಪಿ. ಎಸ್. ಸ್ವಾಗತ ಕೋರಿದರು. ಸಂಸ್ಥೆಯ ಉಪನ್ಯಾಸಕ ಹರಿಪ್ರಸಾದ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಉಪನ್ಯಾಸಕ ಅನಂತಕೃಷ್ಣ ವಂದಿಸಿದರು.

LEAVE A REPLY

Please enter your comment!
Please enter your name here