ನೀಟ್ ಪರೀಕ್ಷೆಯಲ್ಲಿ ಅಮೋಘ ಸಾಧನೆ : ಕುಂಬ್ರ ಮರ್ಕಝುಲ್ ಹುದಾದ ವಿದ್ಯಾರ್ಥಿನಿ ತಸ್ನೀಮಾಗೆ ಉಚಿತ ಎಂಬಿಬಿಎಸ್ ಸೀಟ್

0

  • ಜುನೈಹ 90% ಅಂಕದ ಸಾಧನೆ

ಪುತ್ತೂರು: ನೀಟ್ ಯು.ಜಿ 2026 ಪರೀಕ್ಷೆಯಲ್ಲಿ ಕುಂಬ್ರ ಮರ್ಕಝುಲ್ ಹುದಾ ಪದವಿಪೂರ್ವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಫಾತಿಮತ್ ತಸ್ನೀಮ 524(ಶೇ.96.89) ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದು ಇವರು ಯೆನಪೋಯ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಎಂಬಿಬಿಎಸ್ ಸೀಟ್ ಗಿಟ್ಟಿಸಿಕೊಂಡಿದ್ದಾರೆ. ಇವರು ಈಶ್ವರಮಂಗಲ ಬೆಳ್ಳಿಚೆಡವು ನಿವಾಸಿ ಇಬ್ರಾಹಿಂ ಅವರ ಪುತ್ರಿ.


ಮತ್ತೋರ್ವ ವಿದ್ಯಾರ್ಥಿನಿ ಜುನೈಹ ಮಾಡನ್ನೂರು ಅವರು 440(90%) ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಇವರು ಮಾಡನ್ನೂರು ನಿವಾಸಿ ಸ್ವಲಾಹುದ್ದೀನ್ ಸಖಾಫಿಯವರ ಪುತ್ರಿ. ವಿದ್ಯಾರ್ಥಿನಿಯರ ಸಾಧನೆಗೆ ಮರ್ಕಝುಲ್ ಹುದಾ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂಧನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here