







ರೂ.6.20ಲಕ್ಷ ಲಾಭ, ಶೇ,12 ಡಿವಿಡೆಂಡ್, ರೂ.1.09 ಬೋನಸ್


ಪುತ್ತೂರು: ಕೊಡಿಮರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು 2025-26ನೇ ಸಾಲಿನಲ್ಲಿ 6.20ಲಕ್ಷ ಲಾಭಗಳಿಸಿದೆ. ಸಂಘವು ಗಳಿಸಿದ ಲಾಭಾಂಶದಲ್ಲಿ ಸದಸ್ಯರಿಗೆ ಶೇ.12 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.1.09ಬೋನಸ್ ನೀಡಲಾಗುವುದು ಎಂದು ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷೆ ದೇವಕಿ ಹೇಳಿದರು.



ಸಭೆಯು ಜು.18ರಂದು ಸಂಘದ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘವು ವರದಿ ಸಾಲಿನಲ್ಲಿ ರೈತರಿಂದ 2,17,468 ಲೀಟರ್ ಹಾಲು ಖರೀದಿಸಿದೆ. 363 ಲೀಟರ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಹಾಲು ವ್ಯವಹಾರದಿಂದ ಒಟ್ಟು ರೂ.9,23,856 ಆದಾಯ ಬಂದಿದೆ. 1,634 ಚೀಲ ಪಶು ಆಹಾರ, 1,023 ಪ್ಯಾಕೆಟ್ ಲವಣ ಮಿಶ್ರಣ, 495 ಪ್ಯಾಕೆಟ್ ಸಮೃದ್ಧಿ ಮಾರಾಟ, 850ಬ್ಯಾಗ್ ಸೈಲೇಜ್ ಮಾರಾಟ ಮಾಡಿದ್ದು ಇದರಿಂದ ರೂ.345,000ಆದಾಯ ಬಂದಿದೆ. ಸಂಘದ ಒಟ್ಟು ವ್ಯವಹಾರದಿಂದ ವಾರ್ಷಿಕವಾಗಿ ರೂ.6,20,739.97 ನಿವ್ವಳ ಲಾಭ ಪಡೆದಿರುತ್ತದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಬಿ ಶ್ರೇಣಿಯನ್ನು ಪಡೆದುಕೊಂಡಿದೆ.
ಬಹುಮಾನ ವಿತರಣೆ;
ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಸಂಘದ ಸದಸ್ಯರಾದ ಸವಿತಾ ರಮೇಶ ಶೆಟ್ಟಿ(ಪ್ರ), ಗುಣವತಿ ಗಂಗಯ್ಯ ಗೌಡ(ದ್ವಿ) ಹಾಗೂ ಸೌಜನ್ಯ ಶ್ರೀಕಾಂತ್ ದೇವಾಡಿಗ(ತೃ) ಬಹುಮಾನ ವಿತರಿಸಲಾಯಿತು.
ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್, ವಿಸ್ತರಣಾಧಿಕಾರಿ ಮಾಲತಿ ಪಿ., ಪಶುವೈದ್ಯಾಧಿಕಾರಿ ಡಾ.ಜಿತೇಂದ್ರ ಪ್ರಸಾದ್ ಹೈನುಗಾರಿಕೆಯಲ್ಲಿ ಒಕ್ಕೂಟ ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳು ಹಾಗೂ ರಾಸುಗಳ ಪಾಲನೆ, ಪೋಷಣೆಯ ಬಗ್ಗೆ ಮಾಹಿತಿ ನೀಡಿದರು.
ಸಂಘದ ನಿರ್ದೇಶಕರಾದ ಭವಾನಿ ಜೆ., ಸವಿತಾ, ಹರಿಣಾಕ್ಷಿ, ಇಂದಿರಾ, ಗೀತಾ, ನಮಿತಾ, ಧನ್ಯಶ್ರೀ, ಹಾಗೂ ಸುಜಾತ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯದರ್ಶಿ ಸುಜಾತ ವರದಿ ವಾಚಿಸಿದರು. ಉಪಾಧ್ಯಕ್ಷೆ ಸ್ವಪ್ನ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಉಷಾ ಎಚ್ ಸ್ವಾಗತಿಸಿ, ಭವ್ಯಾ ವಂದಿಸಿದರು. ಹಾಲು ಪರೀಕ್ಷಕಿ ಜ್ಯೋತಿ, ಮಂಜುನಾಥ ಸಹಕರಿಸಿದರು.










