ಕೊಡಿಪ್ಪಾಡಿ ಬಿಲ್ಲವ ಮಹಿಳಾ ಗ್ರಾಮ ಸಮಿತಿ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ

0

ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸಂಘಟನೆ, ಸಂಬಂಧಗಳು ಬೆಳೆಯುತ್ತವೆ: ಉಷಾ ಅಂಚನ್
ಆಟಿ ತಿಂಗಳ ಮಹತ್ವದ ಬಗ್ಗೆ ಈಗಿನ ಪೀಳಿಗೆಗೆ ತಿಳಿಹೇಳುವ ಕಾರ್ಯಕ್ರಮವಾಗಬೇಕು: ಪದ್ಮನಾಭ ಪೂಜಾರಿ ಸಣ್ಣಗುತ್ತು

ಪುತ್ತೂರು: ಕೊಡಿಪ್ಪಾಡಿ ಬಿಲ್ಲವ ಮಹಿಳಾ ಗ್ರಾಮ ಸಮಿತಿ ವತಿಯಿಂದ,ಆಟಿಡೊಂಜಿ ಕೂಟ ಕಾರ್ಯಕ್ರಮ ರಾಧಾಕೃಷ್ಣ ಪೂಜಾರಿ ಅರ್ಕರವರ ಮನೆಯ ವಠಾರದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಮಧೇನು ಮಹಿಳಾ ಸಂಘದ ಅಧ್ಯಕ್ಷೆ ಉಷಾ ಅಂಚನ್ ರವರು ಮಾತನಾಡಿ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಆರೋಗ್ಯವು ಯಾವುದೇ ರೋಗ ರುಜಿನಗಳಿಲ್ಲದೆ ಉತ್ತಮವಾಗಿತ್ತು. ಆದರೆ ಇಂದು ನಾವು ತಿನ್ನುವ ಪ್ರತಿಯೊಂದು ಆಹಾರಗಳು ವಿಷಯುಕ್ತವಾಗುತ್ತಿದೆ. ಆದಷ್ಟು ಮನೆಯಲ್ಲಿಯೇ ಮಾಡಿದ ಸೊಪ್ಪು ತರಕಾರಿಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯವು ಉತ್ತಮ ವಾಗಿರುತ್ತದೆ‌. ಋತುಗಳಿಗನುಸಾರವಾದ ಆಹಾರ ಪದ್ದತಿ ನಮ್ಮದಾಗಬೇಕು. ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಸಮಾಜದಲ್ಲಿ ಸಂಘಟನೆ ಹಾಗೂ ಸಂಬಂಧಗಳು ಬೆಳೆಯುತ್ತವೆ ಎಂದರು.

ನೋಟರಿ ವಕೀಲರಾದ ಪದ್ಮನಾಭ ಪೂಜಾರಿ ಸಣ್ಣಗುತ್ತುರವರು ಮಾತನಾಡಿ ಕೇವಲ ಆಟಿಡೊಂಜಿ ಕಾರ್ಯಕ್ರಮವನ್ನಾಗಿ ಮಾಡದೆ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಪಡುತ್ತಿದ್ದ ಕಷ್ಟಗಳ ಬಗ್ಗೆ, ನಮ್ಮ ಕಟ್ಟುಪಾಡುಗಳ ಬಗ್ಗೆ, ಆಟಿ ತಿಂಗಳ ಮಹತ್ವದ ಬಗ್ಗೆ ಈಗಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ರಾಧಾಕೃಷ್ಣ ಪೂಜಾರಿ ಅರ್ಕ ಹಾಗೂ ಸರೋಜಿನಿ ರಾಧಾಕೃಷ್ಣ ಪೂಜಾರಿ ಅರ್ಕ ದಂಪತಿಗಳನ್ನು ಬಿಲ್ಲವ ಮಹಿಳಾ ಗ್ರಾಮ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಸರ್ವೇಯರ್ ಪ್ರ‌ಮೋದ್ ಕುಮಾರ್ ಪುತ್ತೂರುರವರು ಉದ್ಘಾಟಿಸಿದರು.

ಕೊಡಿಪ್ಪಾಡಿ ಬಿಲ್ಲವ ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆ ನಮಿತ ಶಶಿಧರ್ ಕುಡ್ತಡ್ಕ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜನಾರ್ಧನ ಪೂಜಾರಿ ಪದಡ್ಕ. ತೇಜಾಕ್ಷಿ ಹರಿಶ್ಚಂದ್ರ ಪೂಜಾರಿ ಕುದ್ಮಾನ್. ಮನೋಹರ ಪೂಜಾರಿ ನೆಹರೂ ನಗರ, ರತ್ನಾ ರಾಘವ ಪೂಜಾರಿ ‌ಸವಣೂರು, ಸರೋಜಿನಿ ಅರ್ಕ, ಆನಂದ ಪೂಜಾರಿ ಅರ್ಕ, ಕೇಶವ ಪೂಜಾರಿ ಪೆಲತ್ತಡಿ, ನವೀನ ಪೂಜಾರಿ ಪೆಲತ್ತಡಿ, ರಾಕೇಶ್ ಪೂಜಾರಿ ಓಜಾಲ, ಪುಷ್ಪಾವತಿ ಕೇಕುಡೆ, ಇಂದ್ರೇಶ್ ಕೊಡಿಪ್ಪಾಡಿ, ಸೃಜನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಧಾಕೃಷ್ಣ ಪೂಜಾರಿ ಅರ್ಕ ಸ್ವಾಗತಿಸಿ . ಸುನೀತಾ ಬನ್ಪುಗುಡ್ಡೆ ವಂದಿಸಿದರು. ಮೋಹನ್ ಗುರ್ಜಿನಡ್ಕ ಕಾರ್ಯಕ್ರಮ ನಿರೂಪಿಸಿದರು. ಆಟೋಟ ಸ್ಪರ್ಧೆಗಳು ಹಾಗೂ ಮೂವತ್ತು ಬಗ್ಗೆಯ ತಿಂಡಿ ತಿನಿಸುಗಳು ಕಾರ್ಯಕ್ರಮದಲ್ಲಿ ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here