ಮಹಿಳೆಯ ಅನುಮಾನಾಸ್ಪದ ಸಾವು ತನಿಖೆಯಾಗಲಿ – ಹೇಮನಾಥ ಶೆಟ್ಟಿ ಕಾವು

0

ಪುತ್ತೂರು: ಸಾರೆಪುಣಿಯಿಂದ ವಿವಾಹವಾದ ಮಹಿಳೆಯ ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಿ ಮಹಿಳೆಗೆ ನ್ಯಾಯ ಸಿಗಬೇಕೆಂದು ಕೆಪಿಸಿಸಿ ಸದಸ್ಯ ಕಾವು ಹೇಮನಾಥ ಶೆಟ್ಟಿ ಅವರು ಆಗ್ರಹಿಸಿದ್ದಾರೆ.


ಜು.22ರಂದು ಅವರು ಸಾರೆಪುಣಿ ಮನೆಗೆ ಭೇಟಿ ನೀಡಿ ಮಹಿಳೆಯ ಪೋಷಕರಿಗೆ ಸಾಂತ್ವಾನ ಹೇಳಿದರು. ಆರೋಪಿಗಳು ಯಾವುದೇ ರೀತಿಯಲ್ಲಿ ಪ್ರಭಾವ ಬೀರುವವರಾಗಿದ್ದರೂ ಸಹ ಇಲ್ಲಿ ಮಹಿಳೆಗೆ ನ್ಯಾಯ ಸಿಗಬೇಕು. ಈ ಕುರಿತು ಸಮಗ್ರ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯ ಮಾಡಲಾಗುವುದು ಎಂದವರು ಹೇಳಿದರು.

ಈ ಸಂದರ್ಭ ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೊರಿಕ್ಕಾರ್, ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೈನ್, ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಮೆಲ್ವಿನ್, ಮುಕ್ತಾರ್ ಕುಂಬ್ರ ಮತ್ತಿತರರು ಜೊತೆಗಿದ್ದರು.

LEAVE A REPLY

Please enter your comment!
Please enter your name here