







ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್, ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ ಶಿಬಿರ ಹಾಗೂ ಆಸ್ಟಿಯೋಪೊರೋಸಿಸ್ ತಪಾಸಣಾ ಶಿಬಿರ ನಡೆಯಿತು.


ಆರ್ಥೋಪೆಡಿಕ್ ತಜ್ಞ ಡಾ. ಭಾಸ್ಕರ್ ಎಸ್. ಡಿ. ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರದಲ್ಲಿ 40 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರಿಗೆ ಮೂಳೆ ಸಾಂದ್ರತೆ ಪರೀಕ್ಷೆ ನಡೆಸಿ, ಆಸ್ಟಿಯೋಪೊರೋಸಿಸ್ ಕುರಿತು ಅರಿವು ಮೂಡಿಸಲಾಯಿತು. ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ತಪಾಸಣೆಯ ಸೌಲಭ್ಯವನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮನೋರಮಾ ಸೂರ್ಯ , ಐಎಸ್‌ಒ ಅರುಣಾ ದಿನಕರ್ ರೈ, ಖಜಾಂಚಿ ಕವಿತಾ ಕೋಳತ್ತಾಯ, ಜತೆ ಕಾರ್ಯದರ್ಶಿ ದೀಪಿಕಾ ಕಜೆ, ನಿರ್ದೇಶಕಿ ವೀಣಾ ಬಿ.ಕೆ. ಹಾಗೂ ಇತರ ಸದಸ್ಯೆಯರು ಉಪಸ್ಥಿತರಿದ್ದರು.













