ದೋಳ್ಪಾಡಿ: ಒಡಿಯೂರು ಗ್ರಾಮ ವಿಕಾಸ ಯೋಜನೆಯ ಘಟ ಸಮಿತಿಯ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ

0

ಕಾಣಿಯೂರು: ಒಡಿಯೂರು ಗ್ರಾಮ ವಿಕಾಸ ಯೋಜನೆಯ ದೋಳ್ಪಾಡಿ ಘಟ ಸಮಿತಿಯ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ದೋಳ್ಪಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಜರುಗಿತು. ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕು ಮೇಲ್ವಿಚಾರಕರಾದ ಗೀತಾರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಒಡಿಯೂರು ಗ್ರಾಮ ವಿಕಾಸ ಯೋಜನೆಯ ತಾಲೂಕು ಘಟ ಸಮಿತಿ ಅಧ್ಯಕ್ಷ ಸುಹಾಸ್ ಅಲೆಕ್ಕಾಡಿ, ಕಾಣಿಯೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲೋಕಯ್ಯ ಪರವ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ಮುರುಳ್ಯ ವಲಯದ ಸಂಯೋಜಕಿ ವಿಜಯ, ದೋಳ್ಪಾಡಿ ಪ್ರಾಥಮಿಕ ಶಾಲಾ ಎಸ್ ಡಿ ಎಂಸಿ ಉಪಾಧ್ಯಕ್ಷೆ ವಿನುತಾ ರೈ ಪಿಜಕ್ಕಳ, ಘಟ ಸಮಿತಿ ಅಧ್ಯಕ್ಷೆ ರತ್ನವತಿ ರೈ ಪಿಜಕ್ಕಳ, ನೂತನ ಅಧ್ಯಕ್ಷ ಸಂತೋಷ್ ಕಾಯರ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಚಿತವಾಗಿ ಕಲೆಕ್ಷನ್ ಗೆ ಸ್ಥಳವಕಾಶ ಕೊಟ್ಟ ಲೀಲಾವತಿ ಎ.ಸಿ ಗೌಡ ಅವರನ್ನು ಘಟ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೋಳ್ಪಾಡಿ ಗ್ರಾಮದ ಸೇವಾದೀಕ್ಷಿತೆ ಪ್ರತಿಮಾ ರೈ ಪಿಜಕ್ಕಳ ಉಪಸ್ಥಿತರಿದ್ದರು. ರಕ್ಷಾ ರೈ ಪಿಜಕ್ಕಳ ಕಾರ್ಯಕ್ರಮ ನಿರೂಪಿಸಿದರು. ಗೀತಾ ಡಿ. ಎಮ್ ಸ್ವಾಗತಿಸಿ, ಆಶಾ ಕೆ ವಂದಿಸಿದರು. ಶಾಂತಿ ಮಂತ್ರ ದೊಂದಿಗೆ ಕಾರ್ಯಕ್ರಮ ಮುಕ್ತಯಗೊಂಡಿತ್ತು.

LEAVE A REPLY

Please enter your comment!
Please enter your name here