







ರಾಮಕುಂಜ: ವಿದ್ಯಾಭಾರತಿ ಕರ್ನಾಟಕ ದ.ಕ.ಜಿಲ್ಲೆ, ವಿವೇಕಾನಂದ ಪದವಿಪೂರ್ವ ವಿದ್ಯಾಲಯ ನೆಹರುನಗರ ಪುತ್ತೂರು ಇದರ ಆಶ್ರಯದಲ್ಲಿ ವಿವೇಕಾನಂದ ಪ.ಪೂ.ವಿದ್ಯಾಲಯದಲ್ಲಿ ಜು.16 ಹಾಗೂ 17ರಂದು ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ಜು.28, 29,30ರಂದು ಕಲಬುರ್ಗಿಯಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ.


ಬಾಲಕರ ಬಾಲವರ್ಗ ವಿಭಾಗದಲ್ಲಿ ಧನುಷ್ ಪಿ(100 ಮೀ. ಪ್ರಥಮ, 200 ಮೀ. ಪ್ರಥಮ, 80 ಮೀ. ಹರ್ಡಲ್ಸ್ ದ್ವಿತೀಯ), ತೇಜಸ್ವಿ( 600 ಮೀ. ಪ್ರಥಮ), ವರ್ಣಿತ್ ಕುಮಾರ್ (ಚಕ್ರ ಎಸೆತ ದ್ವಿತೀಯ) ಹಾಗೂ 4*100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬಾಲಕರ ಕಿಶೋರ ವರ್ಗ ವಿಭಾಗದಲ್ಲಿ ವಿನಯ್ (800 ಮೀ.ಪ್ರಥಮ, 1500 ಮೀ. ಪ್ರಥಮ, 3000 ಮೀ. ಪ್ರಥಮ), ಯಶವಂತ್ (ಗುಂಡು ಎಸೆತ ಪ್ರಥಮ, ಹ್ಯಾಮರ್ ಥ್ರೋ ಪ್ರಥಮ, ಜಾವೆಲಿನ್ ಥ್ರೋ ತೃತೀಯ) ಗಗನ್ ಎಂ. (ಉದ್ದ ಜಿಗಿತ ತೃತೀಯ, ಎತ್ತರ ಜಿಗಿತ ಪ್ರಥಮ, ತ್ರಿವಿಧ ಜಿಗಿತ ತೃತೀಯ), ಹಿತೇಶ್ ಆರ್.ಗೌಡ (1500 ಮೀ. ದ್ವಿತೀಯ, 3000 ಮೀ. ದ್ವಿತೀಯ) ತನುಷ್ ಬಿ. ಎಮ್.(5000 ಮೀ. ವೇಗದ ನಡಿಗೆ ದ್ವಿತೀಯ, ಎತ್ತರ ಜಿಗಿತ ದ್ವಿತೀಯ), ಸಮ್ಯಮ್ ಗೌಡ (ಪೋಲ್ ವಾಲ್ಟ್ ಪ್ರಥಮ), ಹರ್ಷಿತ್(ಹ್ಯಾಮರ್ ಥ್ರೋ ದ್ವಿತೀಯ), ಗುರುಕಿರಣ್ (ಗುಂಡೆಸೆತ ದ್ವಿತೀಯ) ಸ್ಥಾನ ಪಡೆದಿದ್ದಾರೆ.
ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೇಮ ಬಿ., ದಿವ್ಯ ಪಿ.ಎನ್., ರಾಘವ ಹಾಗೂ ಕಿಶನ್‌ರಾಜ್ ತರಬೇತಿ ನೀಡಿದ್ದರು.













