







ರಾಮಕುಂಜ: ಮಹಾತ್ಮ ಗಾಂಧಿ ನರೇಗಾ ಯೋಜನೆಯು ಪ್ರಸ್ತುತ ವಿಬಿ ಜಿ ರಾಮ್ ಜಿ ಆಗಿ ಬದಲಾವಣೆಗೊಂಡಿದ್ದು, ನೂತನ ಕಾಯ್ದೆಯಡಿ ಯುಕ್ತಧಾರ ತಂತ್ರಾಂಶದ ಮೂಲಕ ತಯಾರಿಸಿದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಫಲಾನುಭವಿಗಳು ಸದ್ರಿ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಡಬ ತಾ.ಪಂ.ಸಹಾಯಕ ನಿರ್ದೇಶಕ (ಗ್ರಾ.ಉ.) ಸಂದೇಶ್ ಕೆ.ಎನ್. ತಿಳಿಸಿದರು.


ಅವರು ಕೊೖಲ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ 2026-27ನೇ ಸಾಲಿನ ಯುಕ್ತಧಾರ ಕ್ರಿಯಾ ಯೋಜನೆಯಲ್ಲಿರುವ ಫಲಾನುಭವಿಗಳಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆಂಡ್ ಅಜೀವಿಕ ಮಿಷನ್ (ಗ್ರಾಮೀಣ) ಕುರಿತು ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರಸ್ತುತ ಜಿ ರಾಮ್ ಜಿ ಕಾಯ್ದೆಯಡಿ 125 ಮಾನವ ದಿನಗಳ ಅಕುಶಲ ಕೂಲಿ ನೀಡಲಾಗುತ್ತದೆ. ಅಲ್ಲದೆ ಪುರುಷರಿಗೆ ಹಾಗೂ ಮಹಿಳೆಯರಿಗೆ ದಿನ ಕೂಲಿ ರೂ.382 ನೀಡಲಾಗುತ್ತದೆ ಎಂದರು.



ಯೋಜನೆಯ ಸಿವಿಲ್ ವಿಭಾಗದ ತಾಂತ್ರಿಕ ಸಂಯೋಜಕರಾದ ಮೋಹಿತ್ ವೈ ಎಸ್ ಮಾತನಾಡಿ, ಯೋಜನೆಯಡಿ ಸಿವಿಲ್ ವಿಭಾಗದ ಕಾಮಗಾರಿಗಳನ್ನು ಮಾಡಲು ಇರುವ ಫಲಾನುಭವಿಗಳು ತಕ್ಷಣವೇ ಕಾಮಗಾರಿ ಪ್ರಾರಂಭಿಸಬೇಕು. ಯೋಜನೆಯಡಿ ಕಾಮಗಾರಿಗಳನ್ನು ಯಾವ ರೀತಿ ಅನುಷ್ಠಾನಿಸಬೇಕು ಎಂಬುದರ ಕುರಿತು ತಿಳಿಸಿದರು. ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಭರತ್ ರಾಜ್ ಕೆ ಮಾತನಾಡಿ, ಯೋಜನೆಯು 2047ಕ್ಕೆ ವಿಕಸಿತ ಭಾರತವಾಗಬೇಕೆಂಬ ದೂರದೃಷ್ಟಿಯ ಯೋಜನೆಯಾಗಿದೆ. ಈ ಯೋಜನೆ ನೂತನ ತಂತ್ರಜ್ಞಾನಗಳ ಸಹಕಾರದೊಂದಿಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಕೂಲಿ ಹಣ ಜಮೆಯಾಗುವ ವ್ಯವಸ್ಥೆಯನ್ನು ಹೊಂದಿದೆ ಎಂದರು.
ಕಾರ್ಯಾಗಾರದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಫಲಾನುಭವಿಗಳು, ಎನ್ಆರ್ಎಲ್ಎಂ ಪದಾಧಿಕಾರಿಗಳು, ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾ.ಪಂ ಕಾರ್ಯದರ್ಶಿ ಶಾರದ ಸ್ವಾಗತಿಸಿ, ವಂದಿಸಿದರು.










