







ಕಡಬ: ಮರ್ದಾಳ ಪೇಟೆಯಲ್ಲಿ ಮಾಲಿಕರು ತಮ್ಮ ಆಡುಗಳನ್ನು ಮುಕ್ತವಾಗಿ ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಭಾರಿ ತೊಂದರೆಯಾಗುತ್ತಿದೆ.


ಪೇಟೆಯ ರಸ್ತೆಗಳಲ್ಲೇ ಆಡುಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿರುವುದರಿಂದ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನ ಸವಾರರು ತೀವ್ರ ಕಷ್ಟ ಅನುಭವಿಸುವಂತಾಗಿದೆ. ಅಪಘಾತಗಳು ಸಂಭವಿಸುವ ಭೀತಿಯೂ ಎದುರಾಗಿದೆ. ಮರ್ದಾಳ ಪೇಟೆಯು ಸುಬ್ರಹ್ಮಣ್ಯ ಧರ್ಮಸ್ಥಳ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುವ ರಾಜ್ಯ ರಸ್ತೆಯಾಗಿರುವುಂದ ಪ್ರವಾಸಿ ವಾಹನಗಳು ಹೆಚ್ಚಾಗಿ ಸಂಚರಿಸಿ, ವಾಹನ ದಟ್ಟಣೆ ಇರುತ್ತದೆ. ಆದ್ದರಿಂದ, ಆಡುಗಳ ಮಾಲಿಕರು ದಯವಿಟ್ಟು ಜವಾಬ್ದಾರಿಯಿಂದ ನಡೆದುಕೊಂಡು, ಅವುಗಳನ್ನು ಕಟ್ಟಿಹಾಕಬೇಕಾಗಿ ವಿನಂತಿಸಲಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಕೂಡಲೇ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.













