







ರೂ.48.30 ಕೋಟಿ ವ್ಯವಹಾರ, ರೂ.31.76 ಲಕ್ಷ ಲಾಭ, ಶೇ.10 ಡಿವಿಡೆಂಡ್


ಪುತ್ತೂರು:ಪಡೀಲು ಬಾಳಪ್ಪ ಕಾಂಪ್ಲೆಕ್ಸ್ನಲ್ಲಿ ವ್ಯವಹರಿಸುತ್ತಿರುವ ಪುತ್ತೂರು ಮೂರ್ತೆದಾರರ ಸೇವಾ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ರೂ.48.30 ಕೋಟಿ ವ್ಯವಹಾರ ಮಾಡಿ ರೂ.31.76ಲಕ್ಷ ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.




ಮಹಾಸಭೆಯು ಆ.19ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ವರದಿ ವರ್ಷದಲ್ಲಿ ಸಂಘವು 357ಸದಸ್ಯರಿಂದ ರೂ. 6,28,492 ಪಾಲು ಬಂಡವಾಳ ಹೊಂದಿರುತ್ತದೆ. ರೂ.7,38,85,416.96 ವಿವಿಧ ರೂಪದ ಠೇವಣಿ, ರೂ.1,94,63,619.60 ಕ್ಷೇಮ ನಿಧಿ, ರೂ.25,000 ಇತರ ಸಹಕಾರಿ ಸಂಘಗಳಲ್ಲಿ ಪಾಲು ಬಂಡವಾಳ ಹೊಂದಿದೆ. ರೂ.12,545,018 ವಿವಿಧ ಬ್ಯಾಂಕ್ಗಳಲ್ಲಿ ಸಂಘದಿAದ ಠೇವಣಿ ಹೂಡಿಕೆ ಮಾಡಲಾಗಿದೆ. ರೂ.1,00,53,77,230ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ಸಂಘವು ಒಟ್ಟು ರೂ.31,76,717.92 ಲಾಭ ಗಳಿಸಿದೆ. ಲಾಭಾಂಶವನ್ನು ಉಪನಿಬಂಧನೆಯAತೆ ವಿಂಗಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮೂರ್ತೆದಾರರ ಮಹಾಮಂಡಲದ ನಿರ್ದೇಶಕ ಆರ್.ಸಿ ನಾರಾಯಣ ಮಾತನಾಡಿ, ಕಳೆದ ಸಾಲಿನಲ್ಲಿ ರೂ.50ಕೋಟಿ ವ್ಯವಹಾರ ನಡೆಸಿರುವ ಪಡೀಲು ಮೂರ್ತೆದಾರರ ಸಹಕಾರಿ ಸಂಘವು ಮುಂದಿನ ದಿನಗಳಲ್ಲಿ ರೂ.100ಕೋಟಿಯ ವ್ಯವಹಾರ ನಡೆಸುವಂತಾಗಲಿ. ಸಮಾಜದ ಯುವ ಜನತೆ ವಿವಿಧ ಕ್ಷೇತ್ರಗಳಲ್ಲಿ ನಾಯಕರಾಗಿ ಹೊರಹೊಮ್ಮಬೇಕು. ಐಎಎಸ್, ಐಪಿಎಸ್ ಅಧಿಕಾರಿಗಳ ಸಮಾಜ ಬಾಂಧವರು ಮೂಡಿಬರಬೇಕು ಎಂದರು.
ಬ್ರಹ್ಮಶ್ರೀ ನಾರಾಯಗುರು ಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಸಹಕಾರಿ ಸಂಘಗಳಿಗೆ ಕೇವಲ ಲಾಭ ಗಳಿಕೆಯೇ ಉದ್ದೇಶವಲ್ಲ. ಸಮಾಜ ಬಾಂದವರಿಗೆ ಆರ್ಥಿಕ ಸಹಕಾರ ನೀಡುತ್ತಿದೆ. ಸಂಘವು ಗಳಿಸುವ ಲಾಭಾಂಶವು ವಿವಿಧ ರೂಪದಲ್ಲಿ ನಮ್ಮದೇ ಸಮಾಜಕ್ಕೆ ವಿನಿಯೋಗವಾಗುತ್ತಿದ್ದು ಸಮಾಜ ಬಾಂಧವರು ಸಂಘದ ಮೇಲೆ ವಿಶ್ವಾಸವಿಟ್ಟು ಸಂಘದಲ್ಲೇ ವ್ಯವಹರಿ, ಸಹಕರಿಸುವಂತೆ ಅವರು ವಿನಂತಿಸಿದರು.

ಸನ್ಮಾನ, ಗೌರವಾರ್ಪಣೆ:
ಸಂಘದ ಸ್ಥಾಪಕ ನಿರ್ದೇಶಕರು, ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ನಿರ್ದೇಶಕರರಾಗಿರುವ ಜಿನ್ನಪ್ಪ ಪೂಜಾರಿ ಮುರ, ಹಿರಿಯ ಮೂರ್ತೆದಾರ ಹೊನ್ನಪ್ಪ ಪೂಜಾರಿ ಅನಂತಿಮಾರು, ಸಂಘದಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿರುವ ಓಂಕಾರ್ ಸ್ವೀಟ್ಸ್ನ ಮ್ಹಾಲಕ ಚಂದ್ರಹಾಸ ಪೂಜಾರಿ ಬನ್ನೂರು, ಶ್ರೀಗ್ರಾಫಿಕ್ಸ್ನ ಶ್ರೀಧರ ಪೂಜಾರಿ ಅರ್ಕ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತರಾದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಪಿಗ್ಮಿ ಸಂಗ್ರಾಹಕರಾದ ಭಾಸ್ಕರ್ ಕೆ., ದಿನೇಶ್ ಕೆ., ಶಿವಪ್ರಸಾದ್, ಗಣೇಶ್ ಬಿ. ಹಾಗೂ ಧನಂಜಯ ಅವರಿಗೆ ಆರ್ಥಿಕ ಧನ ಸಹಾಯ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ಬಿ.ಕೆ.ಆನಂದ ಸುವರ್ಣ ಬಪ್ಪಳಿಗೆ, ನಿರ್ದೇಶಕರಾದ ವೀರಪ್ಪ ಪೂಜಾರಿ ಡೆಕ್ಕಾಜೆ, ಪದ್ಮಪ್ಪ ಪೂಜಾರಿ ಮತಾವು, ಜಯಲಕ್ಷ್ಮಿ ಸುರೇಶ್ ಕೇಪುಳು, ಗೋಪಾಲಕೃಷ್ಣ ಸುವರ್ಣ ಗೆಣಸಿನಕುಮೇರು, ಜಿನ್ನಪ್ಪ ಪೂಜಾರಿ ಮುರ, ಉಮೇಶ್ ಪೂಜಾರಿ ರಾಗಿದಕುಮೇರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿಗ್ಮಿ ಸಂಗ್ರಾಹಕ ದಿನೇಶ್ ಕೆ. ಪ್ರಾರ್ಥಿಸಿದರು. ವಿಶೇಷಾಧಿಕಾರಿ ರಾಧಾಕೃಷ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಎಂ. ವಾರ್ಷಿಕ ವರದಿ ಮಂಡಿಸಿದರು. ಲೆಕ್ಕಿಗ ಆದರ್ಶ ಆಯ-ವ್ಯಯ ಮಂಡಿಸಿದರು. ಪಿಗ್ಮಿ ಸಂಗ್ರಾಹಕರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು.
ಸದಸ್ಯರ ಸಹಕಾರದಿಂದ ನಮ್ಮ ಸಹಕಾರಿ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಪರ್ಧಾತ್ಮಕ ಯುಗದ ಪೈಪೋಟಿಯಲ್ಲಿ ಸಂಘವು ರೂ.50ಕೋಟಿ ವ್ಯವಹಾರ ಮಾಡುವ ಮೂಲಕ ಉತ್ತಮ ಸಾಧನೆ ಮಾಡಿದೆ. ಸಂಘದ ಬೆಳವಣಿಗೆಯಲ್ಲಿ ಸಿಬ್ಬಂದಿ ವರ್ಗ, ನಿರ್ದೇಶಕರು ಹಾಗೂ ಸದಸ್ಯರ ಸಹಕಾರ ಸಹಕಾರ ಪ್ರಾಮುಖ್ಯವಾಗಿದೆ. ನಿಮ್ಮೆಲ್ಲರ ಸಹಕಾರ ಸಂಘದ ಮೇಲೆ ನಿರಂತವಾಗಿರಲಿ. ಮುಂದಿನ ವರ್ಷ ಸಂಘವು ರೂ.50ಲಕ್ಷ ಲಾಭಗಳಿಸುವ ಗುರಿಯಿದೆ.
-ಸುಂದರ ಪೂಜಾರಿ ಬಡಾವು, ಅಧ್ಯಕ್ಷರು
ಪಡೀಲು ಮೂರ್ತೆದಾರರ ಸೇವಾ ಸಹಕಾರಿ ಸಂಘ










