ಪುತ್ತೂರು: ವಿವೇಕಾನಂದ ಕಾಲೇಜು ವಿದ್ಯಾರ್ಥಿ ಸಂಘ ರಚನೆ

0

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ ಜುಲೈ 25ರಂದು ನಡೆಯಿತು.

ತೃತೀಯ ಬಿ.ಕಾಂ ವಿಭಾಗದ ಪ್ರಣಮ್ ಅವರು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ತೃತೀಯ ಬಿಸಿಎ ವಿಭಾಗದ ಶ್ರೇಯಸ್.ಕೆ.ಆರ್, ಕಾರ್ಯದರ್ಶಿಯಾಗಿ ಹಾಗೂ ತೃತೀಯ ಬಿಎಸ್ಸಿ ವಿಭಾಗದ ಎ.ವಿದ್ಯಾಲಕ್ಷ್ಮೀ ಜತೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ಚುನಾವಣಾ ಕಾರ್ಯವನ್ನು ಚುನಾವಣಾ ಅಧಿಕಾರಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್, ಕನ್ನಡ ವಿಭಾಗ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಮನಮೋಹನ ಎಂ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ವಿಶೇಷ ಅಧಿಕಾರಿ (ಶಿಕ್ಷಕರ ಅಭಿವೃದ್ಧಿ) ಡಾ. ವಿದ್ಯಾ ಎಸ್ ಮತ್ತು ಕಾಲೇಜಿನ ಚುನಾವಣಾ ಆಯೋಗದ ಸದಸ್ಯರು ನಿರ್ವಹಿಸಿದರು.

LEAVE A REPLY

Please enter your comment!
Please enter your name here